ಮಂಗಳವಾರ, ಜೂನ್ 9, 2015

ಬೂದು ಮಂಗಟ್ಟೆ ಹಕ್ಕಿ :

Indian grey hornbill (Ocyceros birostris)
ಬೂದು ಮಂಗಟ್ಟೆ ಹಕ್ಕಿ :
ಪಕ್ಷಿಗಳ ಆದರ್ಶ ದಂಪತಿ ಪಟ್ಟಿಗೆ ಈ ಹಕ್ಕಿಯನ್ನು ಸೇರಿಸಬಹುದು. ಸದಾ ಒಟ್ಟೊಟ್ಟಿಗೆ ಇರುತ್ತವೆ . ಒಟ್ಟಿಗೆ ಹಾರುತ್ತವೆ, ಹಾರುವಾಗ ಭಾರೀ ಶಬ್ದ , ಕೂಗಾಟ ಮತ್ತೂ ಕರ್ಕಶ . ಇದೀಗ ಇವುಗಳ ಸಂತಾನೋತ್ಪತ್ತಿ ಕಾಲ . ಮೊಟ್ಟೆ ಇಡಲು ಮರದ ಪೊಟರೆಯ ಅವಲಂಬನೆ . ಹೆಣ್ಣು ಹಕ್ಕಿ ಪೊಟರೆಯೊಳಗೆ ಕುಳಿತು ಮೊಟ್ಟೆ ಇಟ್ಟು ತನ್ನ ಗರಿಗಳನ್ನು ಅದರ ಮೇಲೆ ಉದುರಿಸುವುದು. ಗಂಡು ಹಕ್ಕಿ ಮಣ್ಣನ್ನು ತಂದು ಪೊಟರೆಯ ರಂಧ್ರವನ್ನು ಮುಚ್ಚುವುದು , ಸಣ್ಣ ಲಂಬ ಸೀಳನ್ನು ಮುಚ್ಚದೇ ಬಿಡುವುದು . ಗಂಡು ಹಕ್ಕಿ ಆ ಸೀಳಿನ ಮೂಲಕ ತನ್ನ ಸಂಗಾತಿಗೆ ಗುಟುಕು ಕೊಡುವುದು . ಮರಿ ದೊಡ್ಡದಾದಂತೆ ಹೆಣ್ಣು ಹಕ್ಕಿಗೆ ಮತ್ತೆ ಗರಿ ಬರುವುದು . ನಂತರ ತನ್ನ ಬಲವಾದ ಕೊಕ್ಕಿನಿಂದ ಆ ಮುಚ್ಚುಗೆಯನ್ನು ತೆರೆದು ಹೊರ ಬರುವುದು . ತದನಂತರ ಗಂಡು, ಹೆಣ್ಣು ಸೇರಿ ರಂಧ್ರವನ್ನು ಪುನಃ ಮುಚ್ಚುವುವು . ಎರಡೂ ಸರದಿಯಲ್ಲಿ ತಮ್ಮ ಕಂದಮ್ಮಗಳಿಗೆ ಗುಟುಕು ಕೊಡುವುವು . ಮರಿ ಬಲಿಷ್ಠವಾದ ಕೂಡಲೆ ರಂಧ್ರದ ಮುಚ್ಚುಗೆಯನ್ನು ತಾಯಿ ತಂದೆಯರೇ ಬಿಡಿಸಿ ಮರಿಗಳನ್ನು ಹೊರತರುವುದು ..ವಿವರಕೃಪೆ: +abhi jith 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ