ಮಂಗಳವಾರ, ಮೇ 4, 2021

ಅನ್ನದಾತ ಸುಖೀಭವ

        ರೈತರು ದವಸ ಧಾನ್ಯ, ತರಕಾರಿ, ಹಣ್ಣು ಬೆಳೆಯದಿದ್ದರೆ ಮನುಜ ಬದುಕಲು  ಸಾಧ್ಯವಿಲ್ಲ. ರೈತನಿಲ್ಲದೆ ಈ ದೇಶ ಉದ್ಧಾರವಾಗುವುದು ಮರೀಚಿಕೆ. ಈ ಮಾತು ಎಲ್ಲರಿಗೂ ಗೊತ್ತಿರುವ ನಿತ್ಯ ಸತ್ಯ. ಆದರೂ ನಾವು ಹೆಚ್ಚಿನ ಮಹತ್ತ್ವ ಕೊಟ್ಟಿರುವುದು ಮಾತ್ರ ಕೈಗಾರಿಕೆಗಳಿಗೇ ಹೊರತು ಕೃಷಿಗಲ್ಲ. ಅದೇ ನಮ್ಮ ಮುಂದಿರುವ ವಿಪರ್ಯಾಸ. ಸಾಲ ಮಾಡಿ ಬೆಳೆ ಬೆಳೆದ ರೈತನಿಗೆ ಅದಕ್ಕೆ ತಕ್ಕ ರೊಕ್ಕ ಸಿಗದೆ ಎಷ್ಟೇ ನಷ್ಟವಾದರೂ ರೈತ ತನ್ನ ಕಾಯಕವನ್ನು ನಿಲ್ಲಿಸುವುದಿಲ್ಲ. 

    ಹಸುರಿನಿಂದ ಕೂಡಿದ ಗದ್ದೆ ಕಾಣುವಾಗ ಮನ ಉಲ್ಲಾಸಗೊಳ್ಳುತ್ತದೆ. ನಾವು ಉಣ್ಣಲು ಏನೂ ತೊಂದರೆ ಇಲ್ಲ ಎಂಬ ಭರವಸೆ ಮನದಲ್ಲಿ ಮಿಂಚುತ್ತದೆ. ರೈತನ ಬೆವರಿನ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಆದರೆ ಅದರ ಹಿಂದೆ ರೈತ ಹರಿಸುವ ಬೆವರಿಗೆ ತಕ್ಕ ಬೆಲೆ ಸಿಗುತ್ತಿಲ್ಲದಿರುವುದು ಶೋಚನೀಯ. ರೈತರಿಗೆ ಸಿಗುವ ಸೌಲಭ್ಯಗಳೂ ಅಷ್ಟಕ್ಕಷ್ಟೇ. ರಸ್ತೆಯಲ್ಲೇ ಕಾಳು ಬೇರ್ಪಡಿಸುವ ವಿಧಾನ ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ಇಲ್ಲಿವೆ ಅಂಥ ಕೆಲವು ದೃಶ್ಯಗಳು. ರೈತರಿಗಿದೋ ನಮ್ಮ ಕೃತಜ್ಞತೆಗಳು.  ಅನ್ನದಾತ ಸುಖೀಭವ.