ಕೆಸಿನೋ ಜೂಜೆಂಬ ಅಡ್ಡೆಯೊಳಗೆ ಪಾದಾರ್ಪಣೆ! (Senecia Niagara Casino)
ಅಮೇರಿಕಾದಲ್ಲಿ ಕೆಸಿನೋ ಎಂಬ ಜೂಜಾಡುವ ಕ್ಲಬ್ ಬಹುಶಃ ಎಲ್ಲ ಊರುಗಳಲ್ಲೂ ಇರಬಹುದೆಂದು ತೋರುತ್ತದೆ. ಅದು ಹೇಗಿರುತ್ತದೆ ಎಂಬ ಅನುಭವ ನಮಗಾಗಬೇಡವೇ? ಅಂಥ ಜಾಗಕ್ಕೆ ಕಾಲಿಡದಿದ್ದರೆ ಅಮೇರಿಕಾ ದೇಶವನ್ನು ಅರಿಯುವುದು ಹೇಗೆ! ಅದಕ್ಕೆ ನಮ್ಮನ್ನು ಅಲ್ಲಿಗೆ ಶಂಭು ಭಾವ ಹಾಗೂ ವಿನೋದಕ್ಕ ಅವರದೇ ಕಾರಿನಲ್ಲಿ ಕರೆದುಕೊಂಡು ಹೋದರು. ಮಾಯಾಲೋಕದೊಳಗೆ ಕಾಲಿಟ್ಟಂತಾಯಿತು. ವಿಶಾಲ ಕೋಣೆ ಜಗಮಗ ಬೆಳಕಿನಿಂದ ಕೂಡಿತ್ತು. ಅಲ್ಲಲ್ಲಿ ನೂರಾರು ಕೆಸಿನೋ ಯಂತ್ರಗಳು. ಎಲ್ಲ ಯಂತ್ರಗಳ ಮುಂದೆ ಜನರು ಕೂತು ಆಟವಾಡುತ್ತಿದ್ದರು. ಕೈಯಲ್ಲಿ ಸಿಗರೇಟ್. ಸಿಗರೇಟಿಗೆ ಹೆಂಗಸು ಗಂಡಸು ಎಂಬ ಭೇದವಿಲ್ಲ. ಒಂದು ಸುತ್ತು ಬಂದೆವು ಅಲ್ಲಿ. ನಮಗೆ ಯಾರಿಗೂ ಹೇಗೆ ಆಡಬೇಕು ಎಂಬ ಗಂಧಗಾಳಿ ಗೊತ್ತಿಲ್ಲ. ಇಪ್ಪತ್ತು ಡಾಲರ್ ಅನ್ನು ಆ ಯಂತ್ರದೊಳಗೆ ಮಹೇಶ ಹಾಕಿದ. ಎಲ್ಲರೂ ಕೈಯಾಡಿಸಿ ಆಟ ಆಡಿ ಇಪ್ಪತ್ತು ಡಾಲರ್ ಕಳೆದುಕೊಂಡು ೫೦ ಸೆಂಟ್ ಸಂಪಾದಿಸಿದೆವು! ಅಲ್ಲಿ ಸಿಗರೇಟ್ ಹೊಗೆಯಲ್ಲಿ ಉಸಿರುಕಟ್ಟಿದ ವಾತಾವರಣ. ಒಮ್ಮೆ ಹೊರಹೋದರೆ ಸಾಕೆಂಬ ಭಾವ. ಆ ವೈಭವವನ್ನು ನೋಡಿದ ಅನುಭವದೊಂದಿಗೇ ಕೆಸಿನೋ ಎಂದರೆ ಹೇಗಿರುತ್ತದೆ ಎಂಬ ಜ್ಞಾನ ಸಂಪಾದಿಸಿದ ತೃಪ್ತಿಯೊಂದಿಗೆ ಇನ್ನು ಮುಂದೆ ಇಲ್ಲಿ ಕಾಲಿಡುವ ಆಸೆಯೇ ಆಗಲಿಕ್ಕಿಲ್ಲ ಎಂದು ಹೊರಬಂದೆವು.

ಕೆಸಿನೋ ನಯಾಗರ ಕಟ್ಟಡ ಒಂದು ಲಕ್ಷದ ನಲವತ್ತೇಳು ಚದರಡಿ ಸ್ಥಳದಲ್ಲಿ ೯೯ ಆಟದ ಮೇಜುಗಳನ್ನು ಹೊಂದಿದ್ದು, ೪೨೦೦ ಯಂತ್ರಗಳಿವೆ. ಈ ಕೆಸಿನೊ ೨೦೦೨ರಲ್ಲಿ ತೆರೆಯಲ್ಪಟ್ಟಿದೆ. ಕೆಸಿನೋ ಒಳಗೆ ಹೋಗಬೇಕಾದರೆ ೨೧ ವರ್ಷ ಆಗಿರಬೇಕು. ನಮ್ಮನ್ನು ನೋಡುವಾಗ ೨೧ ಆಗಿಲ್ಲವೆಂದು ಸಂಶಯ ಬಂದರೆ ಗುರುತಿನ ಚೀಟಿ ಕೇಳುತ್ತಾರೆ. (ಅಕ್ಷರಿಗೆ ಕೇಳಿದರು. ಹಾಗೆ ಅವಳಿಗೆ ಭಾರೀ ಖುಷಿ!) ವಾರದ ಏಳೂ ದಿನ ೨೪ ಗಂಟೆ ತೆರೆದಿರುತ್ತದೆ. ಹಣ ಸಂಪಾದನೆಗೆ ಹಾಗೂ ಕಳೆದುಕೊಳ್ಳಲು ಮುಕ್ತ ಅವಕಾಶ! ಆಟ ಆಡಿ ಮನೆಗೆ ಹೋಗಲು ಆಗದಿದ್ದರೆ ಉಳಿದುಕೊಳ್ಳಲು ಅವರದೇ ಹೊಟೇಲ್ ರೂಮುಗಳಿವೆ. ಕಾರು ನಿಲ್ಲಿಸಲು ಮೂರು ಅಂತಸ್ತಿನ ವಿಶಾಲ ಸ್ಥಳಗಳಿವೆ. ನಾವು ಅಲ್ಲೇ ಕಾರ್ ಪಾರ್ಕ್ ಮಾಡಿದೆವು.
ರಾತ್ರಿಯ ನಯಾಗರದ ಚೆಲುವು
ಕೆಸಿನೋದಲ್ಲಿ ಕಾರ್ ಪಾರ್ಕ್ ಮಾಡಿ ನಾವು ಅನತಿ ದೂರದಲ್ಲಿದ್ದ ನಯಾಗರ ಜಲಪಾತದತ್ತ ನಡೆದೆವು.
ಬಣ್ಣ ಬಣ್ಣದ ವಿದ್ಯುತ್ ಬೆಳಕಿನಲ್ಲಿ ಜಲಪಾತದ ದೃಶ್ಯ ನೋಡಲು ನಯನ ಮನೋಹರವಾಗಿತ್ತು. ವೈವಿಧ್ಯಮಯ ಪಟಾಕಿಗಳನ್ನು ಹಾರಿಸಿದರು. ಕೆನಡಾ ಭಾಗದಿಂದ ಹಾರಿಸಿದ ಪಟಾಕಿಗಳ ಚಿತ್ತಾರ ಕತ್ತಲೆಯಲ್ಲಿ ಮನದಣಿಯೆ ನೋಡಿದೆವು. ಜೂನ್ ತಿಂಗಳಿಂದ ಸೆಪ್ಟೆಂಬರ ತಿಂಗಳಿನ ತನಕ ರಾತ್ರಿ ೯ ಗಂಟೆಗೆ ಪಟಾಕಿ ಹಾರಿಸುತ್ತಾರಂತೆ. ನಯಾಗರದ ರಾತ್ರಿಯ ಚೆಲುವೇ ಬೇರೆ ರೀತಿಯದು. ಸುಮಾರು ಹೊತ್ತು ಜಲಪಾತದ ವೈಭವವನ್ನು ನೋಡುತ್ತ ನಿಂತೆವು. ಸಣ್ಣಗೆ ಮಳೆ ಹನಿ ಪನ್ನೀರಿನಂತೆ ಸಿಂಪಡಿಸಿ ಹೋಯಿತು. ಪ್ರತೀದಿನ ರಾತ್ರಿ ಎಲ್ ಇ ಡಿ ಬೆಳಕಿನಲ್ಲಿ ನಯಾಗರದ ಚೆಲುವು ಇಮ್ಮಡಿಯಾಗುತ್ತದೆ.
ಬಫೆಲೋ ವಿಶ್ವವಿದ್ಯಾನಿಲಯ
ನಯಾಗರ ನೋಡಲು ಹೋಗುವ ದಾರಿಯಲ್ಲಿ ಶಂಭು ಭಾವ ಕೆಲಸ ಮಾಡುವ ವಿದ್ಯಾನಿಲಯಕ್ಕೆ ಹೊರಗಿನಿಂದ ಕಾರಿನಲ್ಲಿ ಒಂದು ಸುತ್ತು ಹಾಕಿ ತೋರಿಸಿದರು.
ನಯಾಗರ ಫಾಲ್ಸ್ ಸ್ಟೇಟ್ ಪಾರ್ಕ್ ( ಪ್ರಾಸ್ಪೆಕ್ಟ್ ಸ್ಟ್ರೀಟ್ ಮತ್ತು ಓಲ್ಡ್ ಫಾಲ್ಸ್ ಸ್ಟ್ರೀಟ್, ನಯಾಗರ ಫಾಲ್ಸ್ ನ್ಯೂಯಾರ್ಕ್ phone no. (716)278-1730, (716)278-1796
ತಾರೀಕು ೬-೭-೧೮ರಂದು ಬೆಳಗ್ಗೆ ಎದ್ದು ತಯಾರಾದೆವು. ಶಂಭು ಭಾವ ಯೋಗಾಭ್ಯಾಸ ಮಾಡುತ್ತಿದ್ದ. ಬಾಲ್ಯದಲ್ಲಿ ಅವನ ಸೋದರ ಮಾವ (ನಮ್ಮ ದೊಡ್ಡಪ್ಪ) ಹೇಳಿಕೊಟ್ಟದ್ದಂತೆ. ಅದನ್ನು ಈಗಲೂ ರೂಢಿಯಲ್ಲಿಟ್ಟು ಅಭ್ಯಾಸ ಮಾಡುತ್ತಿರುವುದು ನೋಡಿ ಖುಷಿಯಾಯಿತು. (ಕೆಲವು ವರ್ಷ ಅವನು ಶಾಲೆಗೆ ಅಜ್ಜನ (ನಮ್ಮ ಮನೆ) ಮನೆಯಿಂದ ಹೋಗಿದ್ದ. ಆ ದಿನಗಳ ನೆನಪು ನನಗೆ ಇಲ್ಲ.) ಬಾಲ್ಯದ ಕೆಲವು ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತ ತಿಂಡಿ ತಿಂದೆವು. ಶಂಭು ಭಾವ ವಿನೋದಕ್ಕನಿಗೆ ಧನ್ಯವಾದವನ್ನರ್ಪಿಸಿ ೮.೫೦ಕ್ಕೆ ಅಲ್ಲಿಂದ ನಿರ್ಗಮಿಸಿದೆವು. ಅವರು ಕೇಸರಿ ಕಾಣಿಕೆ ಕೊಟ್ಟರು.

ಹಿಂದಿನ ದಿನ ಕೆಸಿನೋ ಕಟ್ಟಡದಲ್ಲಿ ಕಾರ್ ಪಾರ್ಕ್ ಮಾಡಲು ತೋರಿಸಿದ ಕಾರಣ ಸುಲಭದಲ್ಲಿ ಕಾರ್ ನಿಲ್ಲಿಸಿ ನಾವು ನಯಾಗರ ನೋಡಲು ಹೋದೆವು. ನಾವು ಅಂತರ್ಜಾಲದಲ್ಲೆ ಮೊದಲೇ ಡಿಸ್ಕವರಿ ಪಾಸ್ ಟಿಕೆಟ್ ಕೊಂಡಿದ್ದೆವು. ಟೆಕೆಟ್ ಶುಲ್ಕ ಒಬ್ಬರಿಗೆ ೪೬ ಡಾಲರ್. ಅದರಲ್ಲಿ ಕೇವ್ ಆಫ್ ವಿಂಡ್, ಮೇಡ್ ಆಫ್ ದ ಮಿಸ್ಟ್, ಟ್ರಾಲಿ ರೈಡ್, ಅಕ್ವೇರಿಯಂ ವೀಕ್ಷಣೆ, ಅಡ್ವೆಂಚರ್ ಥಿಯೇಟರ್, ನಯಾಗರ ಜಾರ್ಜ್ ಡಿಸ್ಕವರಿ ಸೆಂಟರ್, ಇಷ್ಟನ್ನು ನೋಡಲು ಆ ಟಿಕೆಟಿನಲ್ಲಿ ಅವಕಾಶ ಇರುತ್ತದೆ.
೧೮೮೫ರಲ್ಲಿ ಸ್ಥಾಪಿಸಲ್ಪಟ್ಟ ನಯಾಗರ ಸ್ಟೇಟ್ ಪಾರ್ಕ್ ೨೨೧ ಎಕರೆ ಪ್ರದೇಶದಷ್ಟು ವಿಸ್ತಾರವಾಗಿದೆ. ಅದನ್ನು ೧೯೬೬ರಲ್ಲಿ ಐತಿಹಾಸಿಕ ತಾಣವೆಂದು ಘೋಷಿಸಲಾಯಿತು.
ಕೇವ್ ಆಫ್ ದ ವಿಂಡ್ಸ್
ಮೊದಲಿಗೆ ನಾವು ಕೇವ್ ಆಫ್ ದ ವಿಂಡ್ಸ್ ನೋಡಲು ಹೋದೆವು. ಹೋಗುವ ಮೊದಲು ಹಳದಿ ಬಣ್ಣದ ಮಳೆ ಅಂಗಿ, ಚಪ್ಪಲಿ ಕೊಡುತ್ತಾರೆ. ನಮ್ಮ ಚಪ್ಪಲಿ ಬಿಚ್ಚಿಟ್ಟು ಅವರಿತ್ತ ಚಪ್ಪಲಿ ಹಾಕಿಕೊಳ್ಳಬೇಕು. ಮೊದಲು ನಾವು ೧೭೫ ಅಡಿ ಕೆಳಗೆ ಎಲಿವೇಟರಿನಲ್ಲಿ ನಯಾಗರ ಜಾರ್ಜ್ ಗೆ ಹೋಗಬೇಕು. ಅಲ್ಲಿಂದ ನಾವು ಮಳೆ ಅಂಗಿ ಧರಿಸಿ ಇನ್ನೂ ಕೆಳಗೆ ಹೋಗಿ ಜಲಪಾತದ ರುದ್ರ ರಮಣೀಯತೆಯನ್ನು ಕಣ್ಣುತುಂಬಿಕೊಳ್ಳಬಹುದು. ರಭಸದಿಂದ ಬೀಳುವ ನೀರಿನ ಸಿಂಚನದಿಂದ ಅಂಗಿ ತೋಯುತ್ತದೆ. ಸುಮಾರು ದೂರಕ್ಕೆ ನೀರು ಹಾರುತ್ತದೆ. ಅಲ್ಲಿ ಕೆಳಗೆ ಮೇಲೆ ಓಡಾಡಲು ಮರದ ಅಟ್ಟಣಿಗೆಗಳನ್ನು ಜೋಡಿಸಿದ್ದಾರೆ. (ಪ್ರತೀ ವರ್ಷ ಚಳಿಗಾಲದಲ್ಲಿ ಹಿಮ ಬಿದ್ದು ಹಾಳಾಗದಂತೆ ಮರದ ಅಟ್ಟಣಿಗೆಗಳನ್ನು ತೆಗೆದಿರಿಸಿ, ಪ್ರವಾಸೀ ಪ್ರಾರಂಭದ ಬೇಸಿಗೆಯಲ್ಲಿ ಪುನಃ ಜೋಡಿಸುತ್ತಾರೆ.)
ಅದರ ಮೇಲೆ ನಿಂತು ಜಲಪಾತದ ವೈಭವವವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ಮೂರನೇ ಕಣ್ಣಾಗಿ ಕ್ಯಾಮಾರಾ ಇರುವುದು ಬೋನಸ್! ಜಲಲ ಜಲಧಾರೆ ಹರಿಯುವ ರಭಸಕ್ಕೆ ನೀರಿನ ಮಂಜು ಆವರಿಸಿ ಹತ್ತಿರದಲ್ಲಿ ಯಾರಿದ್ದಾರೆ ಎಂದು ಕಾಣುವುದಿಲ್ಲ. ಅದನ್ನು ನೋಡುವುದೇ ಸೊಬಗು. ನೋಡಿದಷ್ಟೂ ಕಣ್ಣು ತಣಿಯದು. ಅಲ್ಲಿಂದ ತೆರಳಲು ಮನ ಒಪ್ಪುವುದಿಲ್ಲ. ಆದರೆ ಬೇರೆಲ್ಲ ನೋಡಲು ಸಮಯ ಸಾಕಾಗುವುದಿಲ್ಲ ಎಂಬ ಎಚ್ಚರ ಹೊಂದಿ ಅರ್ಧ ಗಂಟೆ ಅಲ್ಲಿದ್ದು ಮಳೆ ಅಂಗಿ ತೋಯಿಸಿಕೊಂಡು ಅಲ್ಲಿಂದ ಮೇಲೆ ಹೊರಟೆವು.

ಹರಿಕೇನ್ ಡೆಕ್
ಇಲ್ಲಿ ೨೦೦ ಅಡಿ ಹತ್ತಿರದಿಂದ ನೀರು ಬೀಳುವುದನ್ನು ನೋಡಬಹುದು. ಅಲ್ಲಿ ನೀರಿನ ಅಡಿಯಲ್ಲಿ ತಲೆಕೊಟ್ಟು ನಿಲ್ಲಬಹುದು. ಪ್ರತೀದಿನ ನೀರಿನ ಹರಿವು ರಭಸದಿಂದ ಕೂಡಿದ್ದು, ಭೋರ್ಗರೆತದಿಂದ ಅದರ ಚೆಲುವು ಇಮ್ಮಡಿಸುತ್ತದೆ. ಹರಿಕೇನ್ ಡೆಕ್‌ನಲ್ಲಿ ನಿಂತಾಗ ಬ್ರೈಡಲ್ ವೇಲ್ ಜಲಪಾತ ಧುಮ್ಮಿಕ್ಕಿ ಹರಿಯುವುದು ಕಾಣುತ್ತದೆ. ಅಲ್ಲಿ ಕಾಮನ ಬಿಲ್ಲು ಬಹಳ ಸುಂದರವಾಗಿ ಕಾಣಿಸಿತು. ಅಲ್ಲಿ ಯಾವಾಗಲೂ ಕಾಮನಬಿಲ್ಲು ಕಾಣುತ್ತದಂತೆ.

ಪ್ರವಾಸಕ್ಕೆ ಪ್ರಶಸ್ತ ಕಾಲ: ಜೂನ್ ತಿಂಗಳಿನಿಂದ ಅಕ್ಟೋಬರದ ತನಕ. ಅಬ್ಸರ್ವೇಷನ್ ಡೆಕ್‌ನಿಂದ ಚಳಿಗಾಲದಲ್ಲೂ ಬ್ರೈಡಲ್ ವೇಲ್ ಫಾಲ್ಸ್‌ನ್ನು ನೋಡಬಹುದು. ಬ್ರೈಡಲ್ ವೇಲ್ ಫಾಲ್ಸ್, ಅಮೇರಿಕನ್ ಫಾಲ್ಸ್, ಹಾರ್ಸ್ ಶೂ ಫಾಲ್ಸ್ ಎಂಬ ಮೂರು ಜಲಪಾತ ಸೇರಿ ನಯಾಗರ ಜಲಪಾತವಾಗಿರುವುದು.
ಮೈಡ್ ಆಫ್ ದ ಮಿಸ್ಟ್
ಮೈಡ್ ಆಫ್ ದ ಮಿಸ್ಟ್ ನೋಡಲು ಹೋಗಲು ನಾವು ಸರತಿ ಸಾಲಿನಲ್ಲಿ ಅರ್ಧ ಗಂಟೆ ನಿಂತೆವು. ಮೈಡ್ ಆಫ್ ದ ಮಿಸ್ಟ್ ಅಂದರೆ ದೋಣಿಯಲ್ಲಿ ಕೆನಡ ಬದಿಯಿಂದ ನಯಾಗರ ಜಲಪಾತ ವೀಕ್ಷಣೆ. ನೀಲಿ ಬಣ್ಣದ ಮಳೆ ಅಂಗಿ ಕೊಡುತ್ತಾರೆ. ಅದನ್ನು ಹಾಕಿಕೊಂಡು ದೋಣಿ ಏರಬೇಕು. ಕೆನಡ ಬಳಿಯಿಂದ ಜಲಪಾತ ವೀಕ್ಷಣೆ ಬಹಳ ಸುಂದರ ದೃಶ್ಯ. ದೋಣಿ ಅಮೇರಿಕಾ ಬದಿಯ ರೈನ್ ಬೋ ಸೇತುವೆ ಬಳಿಯಿಂದ ಹೊರಟು ನಯಾಗರ ನದಿಯಲ್ಲಿ ಸಾಗಿ ಅಮೇರಿಕನ್ ಫಾಲ್ಸ್, ಬ್ರೈಡಲ್ ವೇಲ್ ಫಾಲ್ಸ್ ನ್ನು ದಾಟಿ ಕೊನೆಗೆ ಹಾರ್ಸ್ ಶೂ ಫಾಲ್ಸ್ ನ ತಿರುವಿನಲ್ಲಿ ದಾಟಿದಾಗ ನೀರಹನಿ ಮುಖಕ್ಕೆ ರಾಚುತ್ತದೆ. ಆಗ ದೋಣಿಯಲ್ಲಿದ್ದ ಎಲ್ಲರ ಹೋ ಎಂಬ ಉದ್ಗಾರ ಹೊರಹೊಮ್ಮುತ್ತದೆ. ನೀರಹನಿ ಹಾರುವುದು ನೋಡಲು ಬಹಳ ಚಂದ. ೬೦೦ ಗ್ಯಾಲನ್ ನೀರು ಬೀಳುವುದನ್ನು ಹತ್ತಿರದಿಂದ ನೋಡಬಹುದು. ಅಲ್ಲಿ ಮೊಬೈಲು ಹೊರ ತೆಗೆದು ಅದು ಒದ್ದೆಯಾಗದಂತೆ ಜಾಗ್ರತೆ ವಹಿಸಿ ಪಟ ತೆಗೆದ ಮಹೇಶ. ದೋಣಿ ಯಾನ ಅಮೆರಿಕಾ ಬದಿಯಿಂದ ಸಾಗಿ ಪ್ರಯಾಣ ಮಧ್ಯದಲ್ಲಿ ಒಂಟಾರಿಯೊ ಕೆನಡಾ ದಾಟಿ ವಾಪಾಸು ದೋಣಿ ಅಮೇರಿಕಾ ಕಡೆಗೆ ಹಿಂದಿರುಗಿ ಹತ್ತಿದ ಸ್ಥಳದಲ್ಲೇ ಇಳಿಸುತ್ತದೆ.
೧೮೪೬ರಲ್ಲಿ ಈ ದೋಣಿ ವಿಹಾರ ಸುರುವಾಗಿತ್ತು. ದೋಣಿ ೮೦ ಅಡಿ ಉದ್ದವಿದ್ದು, ಮೇಲೆ ಮತ್ತು ಕೆಳಗೆ ನಿಲ್ಲಲು ಸ್ಥಳವಿದೆ. ಒಂದು ದೋಣಿಯಲ್ಲಿ ಒಮ್ಮೆಗೇ ೬೦೦ ಮಂದಿ ಪ್ರಯಾಣ ಮಾಡಬಹುದು.
ಪಂಜಾಬಿ ಹಟ್
ನಾವು ೨.೩೦ಗೆ ಪಂಜಾಬಿಹಟ್ ನಲ್ಲಿ ಊಟ ಮಾಡಿದೆವು. ೧೫ ಡಾಲರಿಗೆ ಬಫೆ ಊಟ ಚೆನ್ನಾಗಿತ್ತು. ಆ ರಸ್ತೆಯಲ್ಲಿ ಭಾರತದ ಧ್ವಜ ಹಾರಾಡುತ್ತಲಿತ್ತು. ಅಮೆರಿಕಾದಲ್ಲಿ ಭಾರತದ ಧ್ವಜ ನೋಡುವಾಗ ರೋಮಾಂಚನವಾಗಿ ಧ್ವಜದೆದುರು ನಿಂತು ಪಟ ಕ್ಲಿಕ್ಕಿಸಿಕೊಂಡೆವು.

ಟ್ರಾಲಿ ರೈಡ್ (ನಯಾಗರ ಸೀನಿಕ್ ಟ್ರಾಲಿ)
ಈ ಟ್ರಾಲಿಯಲ್ಲಿ ನಯಾಗರ ಸ್ಟೇಟ್ ಪಾರ್ಕ್ ಒಳಗೆ ಎಲ್ಲ ಕಡೆ ಸುತ್ತಬಹುದು. ಬಹಳ ವಿಸ್ತಾರವಾದ ಸ್ಥಳ. ಹಾಗಾಗಿ ನಡೆದು ಎಲ್ಲ ನೋಡಲು ಸಮಯ ಸಾಲದು. ಹಾಗಾಗಿ ನಾವು ನಡೆಯುವುದರ ಜೊತೆಗೆ ಟ್ರಾಲಿ ಹತ್ತಿ ಹೋಗಿ ತ್ರಿ ಸಿಸ್ಟರ್ ಐಲ್ಯಾಂಡ್ ನೋಡಿ ಬಂದೆವು. ಈ ಟ್ರಾಲಿ ಬಸ್ ಹತ್ತಿ ಒಂದು ಕಡೆ ಇಳಿದು ನೋಡಿ, ಪುನಃ ಬಸ್ ಹತ್ತಿ ಇನ್ನೊಂದು ಸ್ಥಳಕ್ಕೆ ಹೋಗಬಹುದು.
ಅಬ್ಸರ್‌ವೇಷನ್ ಟವರ್
ಅಬ್ಸರ್ವೇಷನ್ ಟವರ್ ಹತ್ತಿ ಅಲ್ಲಿಂದ ನಾವು ಮೂರು ಫಾಲ್ಸಿನ ಚೆಲುವನ್ನು ನೋಡಿದೆವು.
ರೈನ್ ಬೋ ಸೇತುವೆ
ನಯಾಗರ ನದಿ ಕಣಿವೆಯಲ್ಲಿರುವ ರೈನ್ ಬೋ ಸೇತುವೆ ವಿಶ್ವ ಪ್ರಸಿದ್ಧ ಪ್ರವಾಸೀತಾಣವಾಗಿದೆ. ಇದು ನ್ಯೂಯಾರ್ಕ್ ಯು ಎಸ್.ಎ ಮತ್ತು ನಯಾಗರ ಫಾಲ್ಸ್ ಒಂಟಾರಿಯೊ ಕೆನಡವನ್ನು ಸಂಪರ್ಕಿಸುತ್ತದೆ. ಈ ಇಂಟರ್ ನ್ಯಾಷನಲ್ ಸೇತುವೆ ೧೯೪೧ರಲ್ಲಿ ಕಟ್ಟಲ್ಪಟ್ಟಿತು.

ಸಿನೆಮಾ
ನಯಾಗರದ ಇತಿಹಾಸದ ಬಗ್ಗೆ ಸಿನೆಮಾ ನೋಡಿದೆವು.
ಅಮೇರಿಕಾ ಸಂಯುಂಕ್ತ ಸಂಸ್ಥಾನ ಮತ್ತು ಕೆನಡಾ ದೇಶಗಳ ಅತ್ಯಂತ ಸುಂದರ ಮತ್ತು ಅತಿದೊಡ್ಡ ಜಲಪಾತ ನಯಾಗರ ಫಾಲ್ಸ್. ಈ ಜಲಪಾತ ಎರಡೂ ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕಾ, ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕಾದ ಇರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ನಯಾಗರ ನದಿ ಈ ಅದ್ಭುತ ಜಲಪಾತವನ್ನು ಸೃಷ್ಟಿಸಿದೆ. ಅಮೇರಿಕನ್ ಜಲಪಾತ (ಎತ್ತರ ೧೧೦ ಅಡಿ, ಅಗಲ ೯೫೦ ಅಡಿ) ಚಿಕ್ಕದಾಗಿ, ಬ್ರೈಡಲ್ ವೇಲ್ (ಎತ್ತರ೭೮ ಅಡಿ, ಅಗಲ ೫೬ ಅಡಿ) ಜಲಪಾತ ಇನ್ನೂ ಚಿಕ್ಕದಾಗಿ, ಹಾರ್ಸ್ ಶೂ ಜಲಪಾತ (೧೬೭ ಅಡಿ ಎತ್ತರ, ಅಗಲ ೨೭೦೦ ಅಡಿ) ದೊಡ್ಡ ಗಾತ್ರದಲ್ಲಿ ಹರಿಯುತ್ತದೆ.
ನಯಾಗರ ಜಲಪಾತದದ ಎತ್ತರ ೧೭೩ ಅಡಿ. ಪ್ರತೀ ವರ್ಷ ೧೨ ದಶಲಕ್ಷ ಪ್ರವಾಸಿಗರು ನಯಾಗರದ ಸೊಬಗನ್ನು ನೋಡಲು ಇಲ್ಲಿ ಬರುತ್ತಾರೆ. ಜಲವಿದ್ಯುತ್ ಸ್ಥಾವರವೂ ಇಲ್ಲಿದೆ. ೧೭೬೨ರಲ್ಲಿ ಬ್ರಿಟಿಷ್ ಸೈನ್ಯದ ಅಧಿಕಾರಿ ಕ್ಯಾಪ್ಟನ್ ಥಾಮಸ್ ಡೇವಿಸ್ ಈ ಪ್ರದೇಶವನ್ನು ಮೊದಲಿಗೆ ಸಮೀಕ್ಷೆ ಮಾಡಿದರು ಎಂಬ ಉಲ್ಲೇಖವಿದೆ.
ಅಕ್ವೇರಿಯಂ ನೋಡಲು ನಮಗೆ ಸಮಯ ಸಾಲಲಿಲ್ಲ. ಬೆಳಗ್ಗಿನಿಂದ ಸುತ್ತಿ ಸಾಕಾಗಿತ್ತು. ಹಾಗಾಗಿ ಅಕ್ವೇರಿಯಂ ನೋಡುವ ಉಮೇದು ಯಾರಿಗೂ ಬರಲಿಲ್ಲ.
ಟೆರ್ರಾಪಿನ್ ಪಾಯಿಂಟ್
ಟ್ರಾಲಿ ಬಸ್ಸಿನಲ್ಲಿ ನಾವು ಟೆರ್ರಾಪಿನ್ ಪಾಯಿಂಟ್ ಕಡೆಗೆ ಸಾಗಿ ಅಲ್ಲಿ ಹಾರ್ಸ್ ಶೂ ಫಾಲ್ಸ್ ನೋಡಿದೆವು. ಅಲ್ಲಿ ಪಟ ಕ್ಲಿಕ್ಕಿಸಿಕೊಂಡು ವಾಪಾಸು ಟ್ರಾಲಿ ಬಸ್ ಹತ್ತಿ ಹಿಂದೆ ಬಂದೆವು. ನಯಾಗರ ಜಲಪಾತದ ಚೆಲುವನ್ನು ಕಣ್ಣು ಮನದಲ್ಲಿ ತುಂಬಿಕೊಂಡು ಅಲ್ಲಿಂದ ನಿರ್ಗಮಿಸಿದೆವು.

ವರ್ಲ್ ಫೂಲ್ ಸ್ಟೇಟ್ ಪಾರ್ಕ್ (Whirlpool state pArk, Niagara scenic pkwy, Niagara Falls, NY 14303, USA)
ನಾವು ನಯಾಗರ ಜಲಪಾತ ನೋಡಿ ಅಲ್ಲಿಂದ ವರ್ಲ್ ಪೂಲ್ ಸ್ಟೇಟ್ ಪಾರ್ಕಿಗೆ ಹೋದೆವು. ೧೦೯ ಎಕರೆಯಲ್ಲಿ ೧೯೨೮ರಲ್ಲಿ ಸ್ಥಾಪಿಸಲ್ಪಟ್ಟ ವಿಸ್ತಾರವಾದ ಉದ್ಯಾನವನ. ಸಮಯವಿದ್ದರೆ ಅಲ್ಲಿ ಇಡೀ ದಿನ ಸುತ್ತಿ ನೋಡಬಹುದು. ನಯಾಗರ ನದಿ, ಅಲ್ಲಿ ಸುರುಳಿ ಸುತ್ತಿ ಹರಿಯುವ ಪರಿ ನೋಡಲು ಬಹಳ ಚೆನ್ನಾಗಿತ್ತು. ಸುರುಳಿ ಸುತ್ತುವ ವರ್ಲ್ ಫೂಲ್ ಜಾಗ ೧೨೫ ಅಡಿ ಆಳವಿದೆಯಂತೆ. ನಾವು ನೀರು ನೋಡುತ್ತ ಸ್ವಲ್ಪ ಹೊತ್ತು ಕಳೆದೆವು. ಅಲ್ಲಿಂದ ಕೇಬಲ್ ಕಾರಿನಲ್ಲಿ ಕೆನಡ ದೇಶಕ್ಕೆ ಹೋಗಬಹುದಂತೆ. ಕೇಬಲ್ ಕಾರ್ ಸಂಚರಿಸುವುದನ್ನು ನೋಡಿದೆವು.

ಪಾರ್ಕ್ ಪ್ರವೇಶ ಸಮಯ : ಬೆಳಗ್ಗೆ ೬ರಿಂದ ರಾತ್ರೆ ೭ರವರೆಗೆ. ಉಚಿತ ಪವೇಶ.
ಅಲ್ಲಿಂದ ನಾವು ಸಂಜೆ ಹೊರಟು ಸುಮಾರು ೨ ಗಂಟೆ ಪ್ರಯಾಣಿಸಿ ೧೯೦ ಕಿಮೀ ದೂರದ ಎರಿ ಎಂಬ ಊರು ತಲಪಿ ಅಮೆರಿಕಾ ಬೆಸ್ಟ್ ವ್ಯಾಲ್ಯೂ ಹೊಟೇಲ್ ತಲಪಿ ಅಲ್ಲಿ ವಾಸ್ತವ್ಯ ಮಾಡಿದೆವು.
ಮರಳಿ ಮನೆಗೆ (ಓಕ್ ಕ್ರೀಕ್ ಕಡೆಗೆ ಪಯಣ)
ತಾರೀಕು ೭-೭-೧೮ರಂದು ಬೆಳಗ್ಗೆ ಎದ್ದು ಹೊಟೇಲಿನಲ್ಲಿ ಬ್ರೆಡ್ ಕಾಫಿ ಸೇವಿಸಿ, ಅಲ್ಲಿಂದ ಮರಳಿ ಗೂಡಿಗೆ ಹೊರಟೆವು. ಸುಮಾರು ೫೩೦ ಮೈಲಿಯನ್ನು ಸರಿ ಸುಮಾರು ೯ ಗಂಟೆ ಪಯಣಿಸಿ, ದಾರಿ ಮಧ್ಯೆ ಚಿಪ್ಪೊಟ್ಲೆ ಹೊಟೇಲಿನಲ್ಲಿ ಊಟ. ಸಂಜೆ ವಿಶ್ರಾಂತಿಧಾಮದಲ್ಲಿ ಕಾಫಿ, ಕುರುಕಲು ತಿಂಡಿ ತಿಂದು ಸಾಗಿ ಸಂಜೆ ೬ ಗಂಟೆಗೆ ಮಿಲ್ವಾಕಿಯ ಓಕ್ ಕ್ರೀಕ್‌ನಲ್ಲಿರುವ ಟ್ಯಾಂಗಲ್ ವುಡ್ ಮನೆ ತಲಪಿದೆವು. ಅಲ್ಲಿಗೆ ನಮ್ಮ ೯ ದಿನದ ಪ್ರವಾಸ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಕೈತೋಟದ ಬೆರಗು
ಮಂಗಳೂರಿನ ಹಜೀರ ಎಂಬ ಮಹಿಳೆ ಗಂಡ ಎರಡು ಮಕ್ಕಳೊಡನೆ ಟ್ಯಾಂಗಲ್ ವುಡ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಅಕ್ಷರಿಗೆ ತುಂಬ ಮೆಚ್ಚಿನ ದೋಸ್ತಿ. ಹಜೀರ ೧೦*೧೦ ಸ್ಥಳದಲ್ಲಿ ಕೈ ತೋಟ ಮಾಡಿದ್ದಾಳೆ. ತೋಟಕ್ಕೆ ಹೋಗುವೆ, ನೀವೂ ಅಮ್ಮನೂ ಬರುತ್ತೀರ? ಎಂದು ಒಂದು ಬೆಳಗ್ಗೆ ಹಜೀರ ಅಕ್ಷರಿಗೆ ಫೋನ್ ಮಾಡಿದಳು. ತೋಟದ ಬಗ್ಗೆ ಅಕ್ಷರಿ ಮೊದಲೆ ಹೇಳಿದ್ದಳು. ಹಾಗಾಗಿ ತೋಟ ಹೇಗೆ ಮಾಡಿದ್ದಾರೆ ಎಂದು ನೋಡುವ ತೀವ್ರ ಕುತೂಹಲ ನನಗಿತ್ತು. ನಮಗೆ ಮಾಡಲು ಬೇರೆ ಕೆಲಸವೂ ಇರಲಿಲ್ಲ. ಸಂತೋಷದಿಂದಲೇ ಅವಳೊಡನೆ ತೋಟದೆಡೆಗೆ ನಡೆದೆವು.
ಟ್ಯಾಂಗಲ್ ವುಡ್ ವಸತಿ ಸಮುಚ್ಚಯ ಸುಮಾರು ೬೦-೭೦ಕ್ಕೂ ಹೆಚ್ಚು ಮನೆಗಳಿರುವ ದೊಡ್ಡದಾದ ವಠಾರ ಎಂದು ಹೇಳಬಹುದು. ಪ್ರತಿಯೊಂದು ಕಟ್ಟಡದಲ್ಲೂ ೧೦-೧೨ ಮನೆಗಳು. ಹೀಗೆ ಸುಮಾರು ಕಟ್ಟಡಗಳಿವೆ. ಮನೆ ಎದುರು ಕಾರ್ ಪಾರ್ಕಿಗೆ ಸ್ಥಳ. ಮನೆ ಹಿಂದೆ ವಿಶಾಲವಾದ ಹುಲ್ಲುಹಾಸಿನ ಸ್ಥಳವಿದೆ. ಅಂಥ ಎರಡು ಸ್ಥಳಗಳಲ್ಲಿ ಕಮ್ಯುನಿಟಿ ಗಾರ್ಡನ್ ಎಂದು ಪ್ರತೀವರ್ಷ ಒಬ್ಬರಿಗೆ ೧೦*೧೦ ಸ್ಥಳವನ್ನು ೨೫ ಡಾಲರ್ ಪಡೆದು ಕೊಡುತ್ತಾರೆ. ಅಂಥ ಎರಡು ಸ್ಥಳಗಳಲ್ಲಿ ಸುಮಾರು ೨೦ ಮಂದಿ ಕೈತೋಟ ಬೆಳೆಸಿದ್ದಾರೆ. ೧೦*೧೦ ಜಾಗದ ಸುತ್ತ ಮರದ ಪಟ್ಟಿ ಹಾಕಿ ಅದರೊಳಗೆ ಮಣ್ಣು ತುಂಬಿ ಕೊಡುತ್ತಾರೆ. ಅವರವರ ಚೌಕಟ್ಟಿನೊಳಗೆ ಬೆಳೆಸಿದ ತೋಟಕ್ಕೆ ಅವರವರೇ ಬೇಲಿ ಹಾಕಿಕೊಳ್ಳಬೇಕು. ಬೇಲಿ ಹಾಕದೆ ಇದ್ದರೆ ಸಸ್ಯಗಳನ್ನು ತಿನ್ನಲು ಜಿಂಕೆ, ಮೊಲ ಬರುತ್ತದೆ. ಹಾಗಾಗಿ ಮೆಶ್ ಹಾಕಿ ಬೇಲಿ ಹಾಕಿಕೊಳ್ಳುತ್ತಾರೆ. ಕೆಲವರು ಹಾಗೆಯೇ ಬಿಟ್ಟಿದ್ದಾರೆ. ಪಕ್ಷಿಗಳು ಸ್ವಚ್ಛಂದದಿಂದ ಹುಳ ತಿನ್ನಲು ಬರುತ್ತವೆ. ಮೇ ತಿಂಗಳಿನಿಂದ ಅಕ್ಟೋಬರದವರೆಗೆ ನಾವು ಆ ಸ್ಥಳದಲ್ಲಿ ನಮಗೆ ಬೇಕಾದ ಹಣ್ಣು ತರಕಾರಿ ಹೂ ಏನು ಬೇಕಾದರೂ ಬೆಳೆಸಬಹುದು. ನೀರು ಮಣ್ಣು ಅವರು ಕೊಡುತ್ತಾರೆ. ಬೀಜ ಹಾಕಿ, ಅಥವಾ ಸಸಿಯನ್ನು ಕೊಂಡು ತರಬಹುದು. ಗೊಬ್ಬರ ನೀರು ಹಾಕಿ ಬೆಳೆಸುವುದು ನಮ್ಮ ಕೆಲಸ.
ಭಾರತದಿಂದ ಹೋದವರು ಮಾತ್ರವಲ್ಲ. ಅಮೇರಿಕನ್ನರೂ ಕೂಡ ಕೃಷಿ ಮಾಡಿದ್ದಾರೆ. ಅವರ ಮಕ್ಕಳಿಗೆ ಗಿಡ ಹೇಗೆ ಬೆಳೆಯುತ್ತದೆ, ಹಣ್ಣು ತರಕಾರಿ ಬೆಳೆಯುವುದನ್ನು ಹತ್ತಿರದಿಂದ ತೋರಿಸಲು ಅಲ್ಲಿ ಜಾಗ ಪದೆದು ಕೃಷಿ ಮಾಡುತ್ತಾರಂತೆ. ಮಕ್ಕಳೇ ಗಿಡಗಳಿಗೆ ನೀರು ಹಾಕುತ್ತಾರೆಂದು ಹಜೀರ ಹೇಳಿದರು. ಅಲ್ಲಿ ಟೊಮೊಟೋ, ಸೌತೆಕಾಯಿ, ಬೀನ್ಸ್, ಸೊಪ್ಪು, ದೊಡ್ಡಮೆಣಸು, ಸ್ಟಾಬೆರಿ ಮುಂತಾದ ಹಣ್ಣು ತರಕಾರಿಗಳು ಯಥೇಚ್ಛವಾಗಿ ಬೆಳೆದದ್ದನ್ನು ಕಂಡೆ.
ಹಜೀರ ಅಲ್ಲಿ ಕಳೆದ ಮೂರು ವರ್ಷಗಳಿಂದ ಜಾಗ ಪಡೆದು ಕೃಷಿ ಮಾಡುತ್ತಿದ್ದಾರಂತೆ. ಕಳೆದ ವರ್ಷ ೧೦*೧೦ ರ ಎರಡು ಸ್ಥಳ ಸಿಕ್ಕಿತ್ತಂತೆ. ಈ ವರ್ಷ ಸ್ಥಳಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಎರಡು ಜಾಗ ಸಿಕ್ಕಲಿಲ್ಲವಂತೆ. ಅವರು ೧೦*೧೦ ಸ್ಥಳದಲ್ಲಿ ಬೆಳೆಸಿದ ಬೆಳೆ ನೋಡಿ ದಂಗಾಗಿ ಹೋದೆ. ದಂಟಿನ ಸೊಪ್ಪು, ಕೆಂಪು ಹರಿವೆ, ಮೆಂತೆಸೊಪ್ಪು, ಪಾಲಕ್, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ, ನೀರುಳ್ಳಿ ಸೊಪ್ಪು, ಕ್ಯಾರೆಟ್, ಬೀಟ್ರೂಟ್, ದಪ್ಪಮೆಣಸು, ಟೊಮೆಟೊ, ಬೆಂಡೆಕಾಯಿ, ಹಸಿಮೆಣಸು, ಅರಿಶಿನ. ಅಬ್ಬ ಎಲ್ಲರ ತೋಟಗಳಲ್ಲೂ ಬೆಳೆ ಬೆಳೆದದ್ದು ನೋಡುವಾಗ ಬಹಳ ಖುಷಿಯಾಗುತ್ತದೆ.
ಪ್ರತೀದಿನ ಬೆಳಗ್ಗೆ ಅಥವಾ ಸಂಜೆ ಅರ್ಧ ಗಂಟೆ ತೋಟಕ್ಕೆ ನೀರು ಹಾಕಿ, ಕಳೆಗಿಡ ಬಂದರೆ ಕಿತ್ತು ಗಿಡಗಳ ಆರೈಕೆಯಲ್ಲಿ ತೊಡಗುತ್ತಾರೆ. ಅವರಿಗೆ ಆ ಕೆಲಸ ಬಹಳ ಖುಷಿ ಕೊಡುತ್ತದಂತೆ. ಅವರ ಗಂಡ, ಮಕ್ಕಳೂ ಒಮ್ಮೊಮ್ಮೆ ನೀರು ಹಾಕುತ್ತಾರಂತೆ. ಮೇ ತಿಂಗಳಲ್ಲಿ ಮಣ್ಣಿಗೆ ಗೊಬ್ಬರ ಬೆರೆಸಿ ಬೀಜ ಹಾಕಿದರೆ ಅಕ್ಟೋಬರ ತಿಂಗಳಿನವರೆಗೆ ಏನು ಬೇಕಾದರೂ ಬೆಳೆಯಬಹುದು. ಅಕ್ಟೋಬರ ತಿಂಗಳ ಕೊನೆಗೆ ನಾವು ಬೆಳೆದ ಸಸ್ಯಗಳನ್ನೆಲ್ಲ ಕಿತ್ತು ಕಸದ ಬುಟ್ಟಿಗೆ ಹಾಕಿ ಆ ಸ್ಥಳವನ್ನು ಖಾಲಿ ಮಾಡಿ ಕೊಡಬೇಕಂತೆ. ಎಷ್ಟೇ ಬೆಳೆ ಇರಲಿ, ಇನ್ನೂ ಕಾಯಿಗಳು ಇದೆಯೆಂದರೂ ನಿರ್ದಾಕ್ಷಿಣ್ಯವಾಗಿ ತೆಗೆಯಲೇಬೇಕಂತೆ.

ಹಜೀರ ತೋಟಕ್ಕೆ ನೀರು ಹಾಕಲು ಹೋದಾಗಲೆಲ್ಲ ನಾಲ್ಕೈದು ಸಲ ಅವರೊಡನೆ ನಾನೂ ಹೋಗಿದ್ದೆ. ಅಲ್ಲಿಗೆ ಹೋಗುವುದೆಂದರೆ ನನಗೆ ಬಲು ಖುಷಿ. ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಅಕ್ಷರಿಗೂ ಇಷ್ಟವೇ. ನಾವಿಬ್ಬರೂ ಹೋಗುತ್ತಿದ್ದೆವು. ಅಮೆರಿಕಾದಲ್ಲಿ ಗೊಬ್ಬರ, ಮಣ್ಣು, ತರಕಾರಿ ಸಸಿ, ಬೀಜ ಅಂಗಡಿಗಳಲ್ಲಿ ಕೊಳ್ಳಲು ಸಿಗುತ್ತವೆ.
ಹಜೀರ ಬೆಳೆದ ಸೊಪ್ಪು ತರಕಾರಿಗಳಲ್ಲಿ ನಮಗೆ ಯಥೇಚ್ಛವಾಗಿ ಪಾಲು ಸಿಕ್ಕಿದೆ. ಅವರ ಔದಾರ್ಯ ಬಲು ದೊಡ್ಡದು. ಅವರಿಗಿದೋ ನಮನ. ಅವರು ಕೊಟ್ಟ ಸೊಪ್ಪಿನಿಂದ ಮೆಂತೆ ಸೊಪ್ಪಿನ, ಬೀಟ್ರೂಟ್ ಸೊಪ್ಪಿನ ಪತ್ರಡೆ ಎಲ್ಲ ಮಾಡಿದ್ದೇವೆ. ಪರಿಮಳಭರಿತ ತಾಜಾ ಕೊತ್ತಂಬರಿಸೊಪ್ಪಿನಿಂದ ರುಚಿಕರ ಚಟ್ನಿ ಮಾಡಿ ಸವಿದಿದ್ದೇವೆ. ಕಾಸರಗೋಡು ಮೂಲದ ಸಂಧ್ಯಾ (ಅಕ್ಷರಿಯ ಗೆಳತಿ) ಕೂಡ ಅಲ್ಲಿ ತೋಟ ಬೆಳೆಸಿದ್ದರು. ಅವರ ತೋಟದಿಂದ ಅಲಸಂಡೆ, ಕೊತ್ತಂಬರಿಸೊಪ್ಪು ಇತ್ಯಾದಿ ಬಳುವಳಿ ಸಿಕ್ಕಿದೆ. ಅವರಿಗೂ ನಮನ.
ಪೋರ್ಟ್ ವಾಷಿಂಗ್ಟನ್ (ozaukee country, 53074)
ವಿಸ್ಕಾನ್ಸಿನ್ ರಾಜ್ಯದ ಪೋರ್ಟ್ ವಾಷಿಂಗ್ಟನ್ ಗೆ ಓಕ್ ಕ್ರೀಕ್ ಮನೆಯಿಂದ ಸುಮಾರು ೨೭ ಮೈಲಿ, ೪೦ ನಿಮಿಷದ ದಾರಿ. ಅಲ್ಲಿ ಮಿಷಿಗನ್ ಸರೋವರ ನೋಡಲು ಬಹಳ ಚೆಲುವಾಗಿದೆ. ನಾವು ೧೦-೭-೧೮ರಂದು ಮತ್ತು ೨೭-೭-೧೮ರಂದು (ಶಶಾಂಕನನ್ನು ಕರೆದುಕೊಂಡು) ಎರಡು ಸಲ ಅಲ್ಲಿಗೆ ಹೋಗಿದ್ದೆವು. ನಮಗೆ ಬಹಳ ಇಷ್ಟವಾದ ಜಾಗವದು. ಅಲ್ಲಿಗೆ ಹೋಗಲು ಕಾರ್ ಪಾರ್ಕ್ ಮಾಡಿ ನದಿ ದಂಡೆಯಲ್ಲಿ ನಡೆದು ಸಾಗುವಾಗ ನೀರಿನಲ್ಲಿ ಮನೆಗಳ ಪ್ರತಿಬಿಂಬದ ಚಂದ ನೋಡುತ್ತ ನಡೆಯುವುದೇ ಆನಂದ.

ನಾವು ಮಿಷಿಗನ್ ಸರೋವರದಲ್ಲಿ ಪಿಯರ್ ಹೆಡ್ಲೈಟ್ ಇರುವ ಸ್ಥಳಕ್ಕೆ ಹೋದೆವು. ಅಲ್ಲಿಗೆ ಹೋಗಲು ಸರೋವರದ ಮಧ್ಯೆ ಕಾಲು ದಾರಿ ಇದೆ. ಶಶಾಂಕನ ಜೊತೆ ಹೋಗಿದ್ದ ದಿನ ಸರೋವರದ ಉಬ್ಬರ ಬಹಳ ಜೋರಾಗಿತ್ತು. ನೀರು ಮೇಲಕ್ಕೆ ಚಿಮ್ಮುತ್ತಿತ್ತು. ಆ ದೃಶ್ಯ ನೋಡಲು ಬಹಳ ಚಂದ. ಅದನ್ನು ನೋಡುತ್ತ ನಾವು ಅಲ್ಲಿ ಸುಮಾರು ಹೊತ್ತು ಇದ್ದೆವು. ನೀರಿನ ರಭಸ ಎಷ್ಟಿತ್ತೆಂದರೆ ಕಾಲುದಾರಿಯಲ್ಲಿ ಸಾಗುವಾಗ ನೀರು ಮೇಲಕ್ಕೆ ಚಿಮ್ಮಿ ನಾವು ಒದ್ದೆಯಾಗಿದ್ದೆವು. ಅಲ್ಲಿ ಸೂರ್ಯಾಸ್ತ ನೋಡಲು ಪ್ರಶಸ್ತ ಜಾಗ. ಆದರೆ ನಾವು ಅಷ್ಟು ಹೊತ್ತು ನಿಲ್ಲಲಿಲ್ಲ. (ಗಮನಿಸಿ ಸೂರ್ಯಾಸ್ತ ರಾತ್ರೆ ೮ ಗಂಟೆ ಮೇಲೆ!)
ಪೋರ್ಟ್ ವಾಷಿಂಗ್ಟನ್ ನಲ್ಲಿ ಮೊದಲಿಗೆ ನೌಕ್ ಬುಡಕಟ್ಟು ಜನಾಂಗದ ಸ್ಥಳೀಯ ಅಮೇರಿಕನ್ನರು ವಾಸವಾಗಿದ್ದರು. ಇಲ್ಲಿ ವಿದ್ಯುತ್ ಅನಿಲ ಸ್ಥಾವರ ಘಟಕವೂ ಇದೆ.
ಅಂಗಡಿ ಸುತ್ತಾಟ
ಅಮೆರಿಕಾದಲ್ಲಿ ಅಂಗಡಿಗಳು (ಮಾಲ್) ಬಹಳ ಬೃಹತ್ತಾಗಿವೆ. ಸುಮಾರು ಅಂಗಡಿಗಳ ಅಂದಚಂದ ನೋಡಿ ಬಂದಿದ್ದೇವೆ. ೧೨.೭.೧೮ರಂದು ಬೆಸ್ಟ್ ಬೈ ಅಂಗಡಿ. ಅಲ್ಲಿ ಕಂಪ್ಯೂಟರ್, ಟಿವಿ, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳು ದಂಡಿಗಟ್ಟಲೆ ಸಿಗುವ ಅಂಗಡಿ. ಟಿವಿ ತಗೊಳ್ಳಬಹುದು ಎಂದು ಅಕ್ಷರಿ, ಮಹೇಶ ಒತ್ತಾಯಿಸಿದರು. ನಾವು ಬೇಡವೇ ಬೇಡ ಎಂದೆವು. ಬೃಹತ್ ಟಿವಿ ಅಂದ ಚಂದ ಅಲ್ಲಿಯೇ ನೋಡಿ ತೃಪ್ತಿ ಹೊಂದಿದೆವು!
ಅಲ್ಲಿಂದ ಐಕಿಯಾ ಅಂಗಡಿಗೆ ಹೋದೆವು. ಅಲ್ಲೂ ಪಿಂಗಾಣಿ ಸಾಮಾನುಗಳು, ಬಟ್ಟೆಗಳು ಇತ್ಯಾದಿ ಕಣ್ಣ ಅಳತೆಗೆ ಮಿಕ್ಕದಷ್ಟು ಬೃಹತ್ ಸಂಖ್ಯೆಯಲ್ಲಿದ್ದುವು. ಎಲ್ಲ ಕಡೆ ತಿರುಗಿ ಖುಷಿಯಿಂದಲೇ ನೋಡಿದೆವು. ೨೪, ೨೫, ೨೬.೭.೧೮ರಂದು ಬರ್ಲಿಂಗ್ಟನ್, ಆಲ್ಡಿ, ಮನಾರ್ಡ್ ಇತ್ಯಾದಿ ಹೆಸರಿನ ಅಂಗಡಿಗಳಿಗೆ ಭೇಟಿ ಕೊಟ್ಟೆವು. ಒಂದೆರಡು ಪ್ಯಾಂಟ್, ವಾಚ್, ಕಾಫಿ ಫಿಲ್ಟರ್, ಬ್ಯಾಗ್, ದೋಸೆ ಕಾವಲಿ(ಕಬ್ಬಿಣದ್ದು), ಇತ್ಯಾದಿ ಒಂದಷ್ಟು ಜಡ ಸಾಮಾನುಗಳಿಗೆ ಮರುಳಾಗಿ ನನಗೆಂದು ಕೊಂಡುಕೊಳ್ಳಲು ಮಗಳಿಗೆ ಒಪ್ಪಿಗೆ ನೀಡಿದೆ!

ಅಲ್ಲಿ ತರಕಾರಿ ಎಲ್ಲವೂ ಸಿಗುತ್ತದೆ. ಹಣ್ಣು ಸಾಲಾಗಿ ಇಟ್ಟದ್ದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಣ್ಣು ಹೆಚ್ಚಲು ಸಮಯವಿಲ್ಲ ಎಂದಾದರೆ ಹೆಚ್ಚಿಟ್ಟ ಹಣ್ಣನ್ನೇ ಕೊಂಡರಾಯಿತು! ಬಾಳೆ ಹೂ, ಹಲಸಿನಹಣ್ಣೂ ಸ್ಥಾನ ಪಡೆದದ್ದು ಖುಷಿಯಾಯಿತು!
ಕೆನೊಶಾ ಸರೋವರ (Kenosha, southeastern Wisconsin)
ಕೆನೊಶಾ ಸರೋವರ ಕೂಡಾ ಮಿಷಿಗನ್ ಸರೋವರದ ಇನ್ನೊಂದು ಭಾಗ. ಇದು ವಿಸ್ಕಾನ್ಸಿನ್‌ನ ನಾಲ್ಕನೇ ಅತಿದೊಡ್ಡ ನಗರ ಮತ್ತು ಮಿಷಿಗನ್ ಸರೋವರದ ನಾಲ್ಕನೇ ಅತಿದೊಡ್ಡ ನಗರವಾಗಿದೆ. ೧೮೩೫ರಲ್ಲಿ ಈ ನಗರ ಸ್ಥಾಪನೆ. ಓಕ್ ಕ್ರೀಕ್ ನಿಂದ ೨೦ ಮೈಲಿ ದೂರ.
೧೩.೭.೧೯ ಮತ್ತು ೨೬-೭-೧೯ರಂದು ಈ ನಗರಕ್ಕೆ ಭೇಟಿಕೊಟ್ಟೆವು. ಅಲ್ಲಿಯ ಮಿನಿ ರೈಲಿನಲ್ಲಿ ನಾವು ಪೇಟೆ ಸುತ್ತಿದೆವು. ಸರೋವರದ ಬಳಿ ನಡೆದೆವು. ಒಂದಷ್ಟು ಮಂದಿ ದೋಣಿಯಲ್ಲಿ ಸವಾರಿ ನಡೆಸುತ್ತಿದ್ದರು. ಮೀನು ಹಿಡಿಯುತ್ತಿದ್ದರು. ಶಶಾಂಕನನ್ನು ಕರೆದುಕೊಂಡು ಹೋದ ದಿನ ಮಾತ್ರ ನೀರಿನ ಅಬ್ಬರ ನೋಡಿದರೆ ಹೆದರಿಕೆ ಹುಟ್ಟಿಸುವಂತಿತ್ತು. ಆದರೂ ಜನ ದೋಣಿ ಸವಾರಿ ನಡೆಸುತ್ತಿದ್ದರು. ಅದನ್ನು ನೋಡಿ ಅಬ್ಬ ಅವರ ಧೈರ್ಯವೇ ಎಂದೆನಿಸಿತ್ತು.
ಎದುರು ಮನೆ ಸ್ಯಾಂಡಿಯ ತವರೂರು ಕೆನೊಶಾ. ನಾವು ಅವರ ತವರೂರಿಗೆ ಭೇಟಿ ಇತ್ತುದು ಅವರಿಗೆ ಬಹಳ ಖುಷಿ ನೀಡಿತ್ತು!
ಲಿಂಕನ್ ಪಾರ್ಕ್ ಮೃಗಾಲಯ (2001, N clark st,Chicago, Ilinois 60614 USA)
ತಾರೀಕು ೧೪.೭.೧೮ರಂದು ಬೆಳಗ್ಗೆ ೧೦ ಗಂಟೆಗೆ ಓಕ್ ಕ್ರೀಕಿನಿಂದ ನಾವು ಹೊರಟು ಸುಮಾರು ೧೦೦ ಮೈಲಿ ದೂರದ ಷಿಕಾಗೋ ೧೧.೪೫ಕ್ಕೆ ತಲಪಿದೆವು. ೧೨ ಗಂಟೆಗೆ ಲಿಂಕನ್ ಪಾರ್ಕ್ ಮೃಗಾಲಯಕ್ಕೆ ಹೋದೆವು. ಪ್ರವೇಶ ಉಚಿತ.
೩೫ ಎಕರೆ ಪ್ರದೇಶದಲ್ಲಿರುವ ಈ ಮೃಗಾಲಯವನ್ನು ೧೮೬೮ರಲ್ಲಿ ಸ್ಥಾಪಿಸಲಾಯಿತು. ಉತ್ತರ ಅಮೆರಿಕಾದ ಅತ್ಯಂತ ಹಳೆಯ ಪ್ರಾಣಿ ಸಂಗ್ರಹಾಲಯವಿದು. ಈ ಮೃಗಾಲಯದಲ್ಲಿ ೨೦೦ ವಿಧದ ಸುಮಾರು ೧೧೦೦ ಪ್ರಾಣಿಗಳಿವೆ. ಪೆಂಗ್ವಿನ್, ಹಿಮಕರಡಿ, ಗೊರಿಲ್ಲಾಗಳು, ಹುಲಿ, ಸಿಂಹ, ಜಿರಾಫೆ ಇತ್ಯಾದಿ ಪ್ರಾಣಿಗಳನ್ನು ನೋಡಿದೆವು. ಹಾವುಗಳು, ಪಕ್ಷಿಗಳು, ವಿವಿಧ ಸಸ್ತನಿಗಳನ್ನು ಎಲ್ಲವನ್ನೂ ಸುತ್ತಾಡಿ ನೋಡಿದೆವು. ಏನಿದ್ದರೂ ನಮ್ಮ ಮೈಸೂರು ಮೃಗಾಲಯವೇ ಸುಂದರ ಅನಿಸಿದ್ದು ಮಾತ್ರ ಸತ್ಯ!.

೨ ಗಂಟೆಗೆ ಬುತ್ತಿ ಬಿಚ್ಚಿ ಆಲೂಗಡ್ಡೆ ಪರೋಟ ತಿಂದೆವು. ಅಲ್ಲಿ ಅಕ್ವೇರಿಯಂ ನೋಡಿ ಪಾರ್ಕಿನಲ್ಲಿ ಒಂದು ಸುತ್ತು ನಡೆದು ೩ ಗಂಟೆಗೆ ಅಲ್ಲಿಂದ ಹೊರಟೆವು.
ಮಹೇಶನ ಸ್ನೇಹಿತರ ಮನೆಗೆ ಭೇಟಿ
ಇಲಿನಾಯ್ ರಾಜ್ಯದ ಅರೋರದಲ್ಲಿರುವ ಬಾಲಮುರಳಿ ಲೋಕನಾಥನ್ ಹಾಗೂ ಉಮಾ ದಂಪತಿ ಮನೆಗೆ ಹೋದೆವು. ಅವರಿಗೆ ಸಂಜಿತ್, ಕವಿನ್ ಎಂಬ ಇಬ್ಬರು ಮಕ್ಕಳು. ಆಗ ಅಲ್ಲಿ ಬಾಲಮುರಳಿಯವರ ತಂದೆ ತಾಯಿ ಕೂಡ ಇದ್ದರು. ವಿದ್ಯಾಭ್ಯಾಸ ಮುಗಿಸಿ ಮಹೇಶ ಮದ್ರಾಸಿನಲ್ಲಿ ಕೆಲಸಕ್ಕೆ ಸೇರಿದಾಗ ಅದೇ ಕಂಪನಿಯಲ್ಲಿ ಬಾಲಮುರಳಿ ಉನ್ನತ ಹುದ್ದೆಯಲ್ಲಿದ್ದವರು. ಅಲ್ಲೆ ಅವರಿಬ್ಬರ ಸ್ನೇಹಚಾರ ಪ್ರಾರಂಭವಾಗಿತ್ತು. ಬಾಲಮುರಳಿ ಉಮಾ ಸರಳ ಸ್ನೇಹಜೀವಿಗಳು. ನಮಗೂ ಅವರ ಭೇಟಿ ಖುಷಿ ಕೊಟ್ಟಿತು.
ನೇಪರ್ವಿಲ್ಲೆಯ ಸೆಂಟೆನಿಯಲ್ ಪಾರ್ಕ್
ನಾವೆಲ್ಲ ಒಟ್ಟು ಸೇರಿ ನೇಪರ್ವಿಲ್ಲೆಯ ಸೆಂಟೆನಿಯಲ್ ಪಾರ್ಕಿಗೆ ಹೋದೆವು. ಅಲ್ಲಿ ನದಿ ಕಾಲುವೆ ಸುತ್ತ ನಡೆಯಲು ಅಚ್ಚುಕಟ್ಟಾದ ಕಾಲುದಾರಿ ವ್ಯವಸ್ಥೆ ಮಾಡಿದ್ದಾರೆ. ನಾವು ಸ್ವಲ್ಪ ದೂರ ನಡೆದೆವು. ಉಮಾ ಅವರ ಅತ್ತೆ ಮಾವನಿಗೆ ಹೆಚ್ಚು ನಡೆಯಲು ಸಾಧ್ಯವಾಗದ ಕಾರಣ ಹೆಚ್ಚು ದೂರ ನಡೆಯಲಿಲ್ಲ. ನದಿ ದಂಡೆಯಲ್ಲಿ ಕೂತು ಹರಟಿದೆವು. ಅಲ್ಲಿಂದ ಹೊರಟು ಪೇಟೆಬೀದಿಯಲ್ಲಿ ಸುತ್ತಾಡಿದೆವು. ಮರಳಿ ಅವರ ಮನೆಗೆ ತೆರಳಿದೆವು.

ಬಾಲಮುರಳಿ ಅವರ ಮನೆ ನೆಲಮಹಡಿಯಲ್ಲಿ ಪುಟ್ಟ ಥಿಯೇಟರ್ ಇದೆ. ಅಲ್ಲಿ ಬಿಸಿ ಬಿಸಿ ವಡೆ ತಿನ್ನುತ್ತ ರಜನೀಕಾಂತ್ ಅಭಿನಯದ ಶಿವಾಜಿ ಸಿನೆಮಾ ಸ್ವಲ್ಪ ಹೊತ್ತು ವೀಕ್ಷಣೆ ಮಾಡಿದೆವು. ರಾತ್ರಿ ಉಪಾಹಾರ ಇಡ್ಲಿ, ಚಪಾತಿ ಬದನೆ ಗೊಟ್ಸು ಎಲ್ಲ ತಿಂದು ಅವರಿಗೆ ವಂದನೆ ಸಲ್ಲಿಸಿ ನಾವು ಅಲ್ಲಿಂದ ೧೦ ಗಂಟೆಗೆ ನಿರ್ಗಮಿಸಿದೆವು. ೧೨ ಗಂಟೆಗೆ ಓಕ್ ಕ್ರೀಕ್ ಮನೆ ತಲಪಿದೆವು.
ಮುಂದುವರಿಯುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ