ಭಾನುವಾರ, ಫೆಬ್ರವರಿ 5, 2023

ಗುಜರಾತ್ ರಾಜ್ಯದೊಳಗೆ ಪರಿಭ್ರಮಣ - ಸುತ್ತು ೧

ಗುಜರಾತ್ ಪ್ರವಾಸ ಮಾಡಬೇಕೆಂದು ಸುಮಾರು ಹತ್ತು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆವು. ಅದು ಈಗ ಈಡೇರಿತು. ನಾವು (ಅನಂತವರ್ಧನ-ರುಕ್ಮಿಣಿಮಾಲಾ೨೦೨೩ ಜನವರಿ ೨೫-೩೧ರ ವರೆಗೆ  ದಿನ ಗುಜರಾತ್ ಪ್ರವಾಸ (ಸಾಯಿ ಶಿಶಿರ್ ಪ್ರವಾಸೀ ಸಂಸ್ಥೆ, ಬೆಂಗಳೂರು, ೮೯೫೧೩೬೨೯೯೩, ೯೬೦೬೩೬೭೦೦೫)  ಮಾಡಿ ಬಂದೆವು. ಮೈಸೂರಿನಿಂದ ೨೪..೨೦೨೩ರಂದು ರಾತ್ರೆ ೧೧.೩೦ಗೆ ಬಸ್ಸಿನಲ್ಲಿ ಕೆಂಪೇಗೌಡ  ವಿಮಾನ ನಿಲ್ದಾಣಕ್ಕೆ ಹೋದೆವು.

೨೫ರಂದು ಬೆಳಗ್ಗೆ ೨.೪೫ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣ ತಲಪಿದೆವು.  .೨೦ಕ್ಕೆ ವಿಮಾನ ಹೊರಟು .೧೫ಕ್ಕೆ ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಸುರಕ್ಷಿತವಾಗಿ ಇಳಿಸಿದ ವಿಮಾನ ಚಾಲಕನಿಗೆ ನಮಸ್ಕಾರ.

ಏಕತಾನಗರ
   ಹವಾನಿಯಂತ್ರಿತ ಬಸ್ಸಿನಲ್ಲಿ ನಾವು ೪೩ ಮಂದಿ .೩೦ಗೆ ಅಹಮ್ಮದಾಬಾದಿನಿಂದ ಹೊರಟು ಸುಮಾರು ೨೦೦ಕಿಮೀ ಪಯಣಿಸಿ ಏಕತಾನಗರ ತಲಪಿದೆವು. ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲೆಗಳಲ್ಲಿ ವಿಸ್ತಾರವಾದ ಕೃಷಿ ಭೂಮಿ. ಕಣ್ಣಿನ ದೃಷ್ಟಿಗೆ ಎಟಕದಷ್ಟು ಎಕರೆಗಟ್ಟಲೆ ಕೃಷಿ ಚಟುವಟಿಕೆ ಹರಡಿರುವುದು ಸಮಾಧಾನದ ವಿಷಯ. ಅಕ್ಕಿ, ಹತ್ತಿ, ತರಕಾರಿ, ಹೊಗೆಸೊಪ್ಪು, ನೀರುಳ್ಳಿ, ಗೋಧಿ, ಕಡಲೆಕಾಯಿ, ಸಿರಿಧಾನ್ಯಗಳು, ಇತ್ಯಾದಿ ಪ್ರಮುಖ ಬೆಳೆಗಳನ್ನು ಬೆಳೆದದ್ದು ಕಂಡೆವು. ೨೦೦ಕಿಮೀ ಪಯಣದಲ್ಲಿ ಏರು ತಗ್ಗುಗಳಿಲ್ಲದ ಸಮತಟ್ಟಾದ ಉತ್ತಮ ರಸ್ತೆ. ಏಕತಾನಗರದ ಫರ್ನ್  ರೆಸಾರ್ಟ್ ತಲಪಿದಾಗ ೨ಗಂಟೆಅಲ್ಲಿ ವಾಸ್ತವ್ಯಲಗೇಜ್ ಇಟ್ಟು ಅಲ್ಲಿಂದ ಪ್ರಗತಿ ಹೊಟೇಲಿಗೆ ಹೋಗಿ ಊಟಎಲ್ಲರ ಊಟ ಆಗುವಾಗ ೩.೩೦ ದಾಟಿತ್ತು.

 ಅಲ್ಲಿಂದ ಕೇವಾಡಿಯಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆ ನೋಡಲು ಹೋದೆವುಅಲ್ಲಿ ತಲಪಿದಾಗ ಗಂಟೆ. ಅವರ ಬಸ್ಸಿನಲ್ಲೇ  ಕರೆದುಕೊಂಡು ಹೋಗುತ್ತಾರೆ. ಬಸ್ಸಳಿದು ಸ್ವಲ್ಪ ದೂರ ನಡೆಯಲಿದೆ. ನಡೆಯಲು ಸಾಧ್ಯವಿಲ್ಲದವರಿಗಾಗಿ ಗಾಲಿ ಖುರ್ಚಿ (ವೀಲ್ಚೇರ್) ವ್ಯವಸ್ಥೆಯೂ ಇದೆ

ಪ್ರತಿಮೆ ನೋಡಲು ಹೋಗಲು ಮೆಟ್ಟಲು ಹಾಗೂ ವಿದ್ಯುತ್ ಚಾಲಿತ ಚಲಿಸುವ ಮೆಟ್ಟಲು ವ್ಯವಸ್ಥೆ ಇದೆ.
ಪಟೇಲರ ಪ್ರತಿಮೆ ದೂರದಿಂದಲೇ ಗಮನ ಸೆಳೆಯುತ್ತದೆ. ನಾವು ಪ್ರತಿಮೆಯ ಎದುರು ನಿಂತಾಗ, ನಾವು ಪಟೇಲರ ಉಗುರಿನ ಭಾಗಕ್ಕೂ ಬರುವುದಿಲ್ಲ. ತಲೆ ಎತ್ತಿ ನೋಡಿದರೆ ಭವ್ಯ ಪ್ರತಿಮೆ.




ಕೆಳ ಮಹಡಿಯಲ್ಲಿ ವಸ್ತು ಸಂಗ್ರಹಾಲಯ, ಪ್ರತಿಮೆ ಕಟ್ಟಲು ಬಳಸಿದ ಕಬ್ಬಿಣದ ಭಾಗಗಳು ಕಾಣುತ್ತವೆ. ನರ್ಮಾದಾ ನದಿ ದಂಡೆಯಲ್ಲಿ ಈ ಭವ್ಯ ಮೂರ್ತಿ ಇದೆ. ಈ ಜಾಗದಲ್ಲಿ ಮೊದಲು ಕಸ ಸುರಿಯುತ್ತಿದ್ದರಂತೆ. ಈಗ ಈ ಸ್ಥಳ ಪ್ರವಾಸೀ ಆಕರ್ಷಣೆಯಲ್ಲಿ ಒಂದೆನಿಸಿದೆ.  

  ಗುಜರಾತ್ ರಾಜ್ಯದ ಕೆವಾಡಿಯಾ ಬಳಿ ಇರುವ ಏಕತೆಯ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ೧೮೨ಮೀ(೫೯೭ಅಡಿ) ಎತ್ತರವನ್ನು ಹೊಂದಿದೆ. ಇದು ಭಾರತೀಯ  ರಾಜನೀತಿಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭರಾಯ ಪಟೇಲ್ (೧೮೭೫-೧೯೫೦) ಅವರಿಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ. ೩೧ ಅಕ್ಟೋಬರ ೨೦೧೩ರಲ್ಲಿ ಪ್ರಾರಂಭಿಸಿ ೩೦ ಅಕ್ಟೋಬರ ೨೦೧೮ರಲ್ಲಿ ಪೂರ್ಣಗೊಳಿಸಲಾಗಿದೆ. ೧೩೫ ಮೆಟ್ರಿಕ್ ಟನ್ ಹಳೆ ಕಬ್ಬಿಣವನ್ನು ಸಂಗ್ರಹಿಸಿ ಅದರಲ್ಲಿ ೧೦೯ ಟನ್ ಕಬ್ಬಿಣ ಸಂಸ್ಕರಿಸಿ ಪ್ರತಿಮೆಯ ಅಡಿಪಾಯಕ್ಕೆ ಬಳಸಲಾಯಿತು.

ಪ್ರವೇಶ ಶುಲ್ಕ ೩೫೦+೩೦ ಬಸ್ ಶುಲ್ಕ) = ೩೮೦

ಧ್ವನಿ ಬೆಳಕಿನ ಚಿತ್ತಾರ

  ರಾತ್ರಿ ಪ್ರತಿಮೆ ಎದುರು ಧ್ವನಿ ಬೆಳಕಿನ ಪ್ರದರ್ಶನ ಇದೆ. ಎರಡು ಕಡೆ ಇದೆ. ಒಂದು ಪ್ರತಿಮೆ ಇರುವ ಆವರಣದಲ್ಲೇ, ಇನ್ನೊಂದು ಸ್ವಲ್ಪ ದೂರ.  ಅಲ್ಲಿಗೆ ಹೋಗಲು  ಗುಲಾಬಿ ಬಣ್ಣದ ಬ್ಯಾಟರಿ ಚಾಲಿತ ಆಟೋರಿಕ್ಷಾ (ರೂ.೫೦)ವ್ಯವಸ್ಥೆ ಇದೆ. ಅದನ್ನು ನಡೆಸುವವರೆಲ್ಲರೂ ಮಹಿಳೆಯರೇ ಆಗಿರುವುದು ವಿಶೇಷ೭ಗಂಟೆಯಿಂದ .೨೦ರ ತನಕ ಪಟೇಲರ ಇತಿಹಾಸದ ಬಗ್ಗೆ ಧ್ವನಿ ಬೆಳಕಿನ ಚಿತ್ತಾರ ಕಾಣುತ್ತೇವೆ.

ಪ್ರವೇಶ ದರವಿದೆ.
ಲೇಸರ್ ಪ್ರದರ್ಶನ ನೋಡಿ ಸಿಕ್ಕಿದ ವಾಹನದಲ್ಲಿ ನಮ್ಮ ಬಸ್ ಇದ್ದ ಸ್ಥಳಕ್ಕೆ ಬಂದು ಹೊಟೇಲ್ ತಲಪಿದಾಗ ಗಂಟೆ.
ಅಲ್ಲಿ ಭರ್ಜರಿ ಊಟ.

    ಭಾವನಗರ

ತಾರೀಕು ೨೬..೨೩ರಂದು ಬೆಳಗ್ಗೆ .೩೦ಗೆ ತಯಾರಾಗಿ ಕ್ಕೆ ತಿಂಡಿ‌ (ಹೊಟೇಲ್ ವತಿಯಿಂದ ಉಚಿತ? ತರಹೇವಾರಿ ತಿಂಡಿಗಳು, ಹಣ್ಣುಗಳು) ತಿಂದು .೫೦ಕ್ಕೆ ಗುಂಪು ಪಟ ತೆಗೆದು ಹೊರಟದ್ದು ಭಾವನಗರಕ್ಕೆ.
    ಏಕತಾ ನಗರದಿಂದ ಭಾವನಗರಕ್ಕೆ .೩೦ ಗಂಟೆ ಪಯಣ. ೩೦೦ ಕಿಮೀ. ಮಧ್ಯೆ ಚಹಾ ವಿರಾಮ ಕಾಲು ಗಂಟೆ. ಎರಡು ಗಂಟೆಗೆ ಪಂಜಾಬಿ ಹೊಟೇಲಲ್ಲಿ ಊಟ.
ನಿಷ್ಕಳಂಕ ಮಹದೇವ್

    ಊಟವಾಗಿ  .೫೦ಕ್ಕೆ ಹೊರಟು ಹತ್ತಿರದಲ್ಲೇ ಇದ್ದ ನಿಷ್ಕಳಂಕ ಮಹದೇವ್ ಮಂದಿರಕ್ಕೆ ಹೋದೆವು. ಭಾವನಗರದ ಕೊಲಿಯಾಕ್ ಬೀಚಿನಲ್ಲಿರುವ ಸಮುದ್ರದೊಳಗಿನ ಹಿಂದೂ ದೇವಾಲಯ.   ಅಲ್ಲಿ ಕಟ್ಟೆ ಕಟ್ಟಿ ಅದರ ಮೇಲೆ ಧ್ವಜಸ್ಥಂಭವೂ ಇದೆ.  ೫ ಉದ್ಭವ ಶಿವಲಿಂಗಗಳು ಇವೆ.  ಈ ದೇಗುಲಕ್ಕೆ ಹೋಗಲು ಸಮುದ್ರದಲ್ಲಿ ೧ಕಿಮೀ ನಡೆಯಬೇಕು. ನಡೆಯಲಾಗದವರನ್ನು ಗಾಡಿಯಲ್ಲಿ ಕೂರಿಸಿ ನೂಕಿ ಕರೆದುಕೊಂಡು ಹೋಗಿ ತೋರಿಸುತ್ತಾರೆ.



  ಸಮುದ್ರದ ಉಬ್ಬರ ಇಳಿದಾಗ ದೇಗುಲ ಕಾಣುತ್ತದೆ. ಉಬ್ಬರ ಏರಿದಾಗ ಮುಳುಗುತ್ತದೆ. ಈ ಉಬ್ಬರ ಇಳಿತ ಹಾಗು ಏರುವ ಸಮಯ ಒಂದೊಂದು ದಿನವೂ ಬದಲಾಗುತ್ತಿರುತ್ತದೆ. ತಿಥಿಗನುಗುಣವಾಗಿ ಸಮಯ ನಿಗದಿಯಾಗಿರುತ್ತದೆ. ನಾವು ಸಂಜೆ ೩ ಗಂಟೆಗೆ ಹೋದಾಗ ಸಮುದ್ರ ಬಹಳ ಹಿಂದಕ್ಕೆ ಸರಿದಿತ್ತು. ಮತ್ತೆ ಸಂಜೆ ೪ಕ್ಕೆ ನಿಧಾನವಾಗಿ ಅಲೆಗಳು ಹತ್ತಿರ ಹತ್ತಿರ ಬರುತ್ತ ಬರುತ್ತ ಇರುವುದನ್ನು ಕೂತು ನೋಡಿದೆವು. ದಡಕ್ಕೆ ಬಂದು ಶಿವಲಿಂಗಗಳಿದ್ದ ಸ್ಥಳ ನೀರಿನಿಂದಾವೃತವಾಗುವ ದೃಶ್ಯ ನೋಡಿ ಸಂತಸ ಪಟ್ಟೆವು. ಈ ನೋಟ ಬಲು ಚಂದ.

    ನಿಷ್ಕಳಂಕ ಮಹದೇವ್ ಮಂದಿರಕ್ಕೆ ಪೌರಾಣಿಕ ಕಥೆ ತಳುಕು ಹಾಕಿಕೊಂಡಿದೆ. ಕುರುಕ್ಷೇತ್ರ ಯುದ್ಧಾನಂತರ ಪಾಂಡವರು ಈ ಶಿವಲಿಂಗಗಳನ್ನು ನಿರ್ಮಿಸಿದರು.  ಕೌರವರನ್ನು ಕೊಂದ ತರುವಾಯ ಪಾಂಡವರಿಗೆ ತಪ್ಪಿತಸ್ಥ ಭಾವ ಮೂಡಿತು.  ತಮ್ಮ ಪಾಪಗಳಿಗೆ ಪರಿಹಾರವನ್ನು ಕಂಡುಕೊಳ್ಳಲು, ಪಾಂಡವರು ಕೃಷ್ಣನ ಮೊರೆ ಹೋದರು.  ಅವರಿಗೆ ಕಪ್ಪು ಬಾವುಟ ಮತ್ತು ಕಪ್ಪು ಹಸುವನ್ನು ನೀಡಿ ಇದು ಬಿಳಿ ಬಣ್ಣಕ್ಕೆ ತಿರುಗಿದಾಗ ನಿಮ್ಮ ಪಾಪ ಪರಿಹಾರವಾಗುತ್ತದೆ. ಎಂದು ಹೇಳಿದ. ಪಾಂಡವರು ಧ್ವಜ ಹಿಡಿದು  ಗೋವು ಹೋದಲ್ಲೆಲ್ಲ ವರ್ಷಗಳ ಕಾಲ ವಿವಿಧ ಸ್ಥಳಗಳನ್ನು ಸುತ್ತಿದರು. ಕೊನೆಗೆ ಕೊಲಿಯಾಕ್ ಬೀಚಿಗೆ ಬಂದಾಗ ಹಸು ಧ್ವಜ ಎರಡೂ ಬಿಳಿ ಬಣ್ಣಕ್ಕೆ ತಿರುಗಿತು. ಅಲ್ಲಿ ಶಿವನನ್ನು ಕುರಿತು ಪಾಂಡವರು ತಪಸ್ಸನ್ನಾಚರಿಸುತ್ತಾರೆ. ಅಲ್ಲಿ ಶಿವ ಅವರಿಗೆ ಲಿಂಗದ ರೂಪದಲ್ಲಿ ಪ್ರತ್ಯಕ್ಷನಾಗಿ ಅವರ ಪಾಪಗಳನ್ನು ತೊಳೆಯುತ್ತಾನೆ. ಹಾಗಾಗಿ ಅಲ್ಲಿಗೆ ನಿಷ್ಕಳಂಕ ಎಂದು ಹೆಸರು ಬಂತು.

   ಭಾರತೀಯ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಅಮಾವಾಸ್ಯೆಯ ರಾತ್ರಿ ಅಲ್ಲಿ 'ಭದ್ರವಿ' ಎಂದು ಕರೆಯಲ್ಪಡುವ ಪ್ರಸಿದ್ಧ ಜಾತ್ರೆ ನಡೆಯುತ್ತದೆಭಾವನಗರದ ಮಹಾರಾಜರು ಧ್ವಜಾರೋಹಣ ಮಾಡುವ ಮೂಲಕ ದೇವಾಲಯದ ಉತ್ಸವವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಧ್ವಜವು ೩೬೪ ದಿನಗಳವರೆಗೆ ಇರುತ್ತದೆ ಮತ್ತು ಮುಂದಿನ ದೇವಾಲಯದ ಉತ್ಸವದ ಸಮಯದಲ್ಲಿ ಮತ್ತೆ ಬದಲಾಯಿಸಲಾಗುತ್ತದೆ. ಧ್ವಜಸ್ಥಂಬದ ಮೂರು ಸುತ್ತಿನಷ್ಟು ಮುಳುಗುತ್ತದೆಯಂತೆ. 

  ಉಬ್ಬರ ಇಳಿತದ ಸಮಯದಲ್ಲಿ ದಡದಿಂದ ಬರಿಗಾಲಿನಲ್ಲಿ ನಡೆದು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.  ಮಂದಿರದ ಸಂಪೂರ್ಣ ಭೇಟಿಯು ಅದರ ಮೇಲೆ ಅವಲಂಬಿತವಾಗಿರುವುದರಿಂದ ದೇವಾಲಯಕ್ಕೆ ಭೇಟಿ ನೀಡುವ ಮೊದಲು ಸಮುದ್ರದ ಹೆಚ್ಚಿನ ಉಬ್ಬರವಿಳಿತಗಳು ಮತ್ತು ಕಡಿಮೆ ಉಬ್ಬರವಿಳಿತದ ವೇಳಾಪಟ್ಟಿಯನ್ನು ಗಮನಿಸಿ ಮುಂದುವರಿಯಬೇಕಾಗುತ್ತದೆ.

ನಾವು .೩೦ ವರೆಗೆ ಅಲ್ಲಿ ಕೂತು ಸಮುದ್ರದ ಅಲೆಗಳು ಹತ್ತಿರ ಬರುತ್ತ ಇರುವುದನ್ನು  ನೋಡಿದೆವು. ನಾವು ಹಿಂದಿರುಗಿ ದಡ ಸೇರಿದಾಗ ಲಿಂಗಗಳಿದ್ದ ಕಟ್ಟೆ ನೀರಿನಿಂದ ಆವೃತವಾಗಿತ್ತು. ನಾವು ಜಾಗಕ್ಕೆ ಹೋದದ್ದು ಹೌದಾ ಎಂಬ ಸಂಶಯ ಬರುವಂಥ ಸನ್ನಿವೇಶ ಎದುರಾಗಿತ್ತು. ಇಂಥ ನಿಸರ್ಗದ ಚೋದ್ಯ ನೋಡುತ್ತ ದಡದಲ್ಲಿ ಸ್ವಲ್ಪ ಹೊತ್ತು ನಿಂತೆವು. ಕಾಲುದಾರಿ ನೀರಿನಿಂದ ತುಂಬುವುದನ್ನು ನೋಡಬೇಕು ಎಂಬ ಆಸೆ ಕೈಗೂಡಲಿಲ್ಲತಂಡದ ಉಸ್ತುವಾರಿ ಸಚಿವ ಶಿವಕುಮಾರ್ ಎಲ್ಲರನ್ನೂ ಹೊರಡಿಸಿ ಬಸ್ಸು ಹತ್ತಿಸಿದರು.
ಅಲ್ಲೇ ಇದ್ದ  ದೇಗುಲ ನಿಷ್ಕಳಂಕ ರಾಮ ಮಂದಿರ ನೋಡಿ ಹಿಂದಿರುಗಿ ಹೊಟೇಲ್ ವಿರ್ಗೊ ಸುಮೇರು (Virgo sumeru)  ಕೋಣೆಗೆ ಗಂಟೆಗೆ ತಲಪಿದೆವು
ಗಂಟೆಗೆ ಊಟ. ವೈವಿಧ್ಯಮಯ ಬಗೆಗಳು. ಚಪಾತಿ, ಗೋಭಿ, ಸೂಫ್ ಅನ್ನ ದಾಲ್ ಐಸಕ್ರೀಂ ಇತ್ಯಾದಿ.

ಸಸನ್ ಗಿರ್

ತಾರೀಕು ೨೭..೨೩ರಂದು .೪೫ಕ್ಕೆ ಹೊಟೇಲ್ ಖಾಲಿ ಮಾಡಿ ೭ಕ್ಕೆ ತಿಂಡಿ ತಿಂದು ಗಂಟೆಗೆ ಹೊರಟೆವು. ಎಲ್ಲರೂ ಸಮಯಕ್ಕೆ ಸರಿಯಾಗಿ ಹೊರಟು ತಯಾರಾಗಿರುತ್ತಲಿದ್ದರು. ನಮ್ಮ ಮುಂದಿನ ಗುರಿ ಸಸನ್ ಗಿರ್ಭಾವನಗರದಿಂದ ಸಸನ್ ಗಿರ್ ಗೆ ಸುಮಾರು ೨೦೦ಕಿಮೀ ದೂರ. ರಸ್ತೆಯ ಇಕ್ಕೆಲೆಗಳಲ್ಲಿರುವ ಕೃಷಿ ಭೂಮಿ ನೋಡುತ್ತ ಪಯಣಿಸುವುದು ಆಪ್ಯಾಯಮಾನ.   ದ್ವಿಚಕ್ರ ಸವಾರರು ಹೆಚ್ಚಿನ ಮಂದಿಯೂ ಶಿರಸ್ತ್ರಾಣ ಧರಿಸದೆ ವಾಹನ ಚಲಾಯಿಸುವುದು ಕಂಡಿತು. ಮತ್ತೊಂದು ವಿಶಿಷ್ಟ ವಾಹನ ಬೈಕಿಗೆ ರಿಕ್ಷಾ ನಮೂನೆಯ ಶರೀರ ಇರುವುದು ಕಂಡೆವು. 




  ೨.೧೫ ಗಂಟೆಗೆ ಸಸನ್ ತಲಪಿ ಗಂಟೆಗೆ ಊಟವಾಗಿ ೪ಕ್ಕೆ ಗಿರ್ ಅರಣ್ಯದೊಳಗೆ ನಮ್ಮ ಬಸ್ಸಲ್ಲೇ ಹೋಗಿ, ಸಿಂಹ, ನೀಲ್ಗಾಯ, ಸಾರಂಗ, ಜಿಂಕೆ, ನವಿಲು ನೋಡಿದೆವು. ಒಣಗಿದ ಹುಲ್ಲುಗಾವಲಿನಿಂದ ಕೂಡಿದ ಸಣ್ಣ ಸಣ್ಣ ಮರಗಳಿದ್ದ ಅರಣ್ಯಅಲ್ಲಿಂದ .೩೦ಕ್ಕೆ ಹೊರಬಂದೆವು.


 ಸಸನ್ ಗಿರ್  ಗುಜರಾತಿನ  ತಲಾಲಾ ಗಿರ್ ಬಳಿಯ ಅರಣ್ಯ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ. ಈ ವನ್ಯಧಾಮವನ್ನು ೧೯೬೫ರಲ್ಲಿ ಸ್ಥಾಪಿಸಲಾಯಿತು. ೫೪೪.೫೨ ಚದರಮೈಲಿ ವ್ಯಾಪ್ತಿಯಲ್ಲಿದೆ. ಇದು ಏಷ್ಯಾಟಿಕ್  ಸಿಂಹಗಳು ಕಂಡುಬರುವ ಏಷ್ಯಾದ ಏಕೈಕ ಪ್ರದೇಶವಾಗಿದೆ.  

ಸೋಮನಾಥ ದೇಗುಲ

ಸಸನ್ ನಿಂದ  ಸೋಮನಾಥನಗರಕ್ಕೆ ಸುಮಾರು ೫೭ಕಿಮೀ.‌ ನಾವು  ಗಂಟೆಗೆ ಸೋಮನಾಥ ನಗರ ತಲಪಿದೆವುಸೋಮನಾಥ ದೇಗುಲದೊಳಗೆ ಹೋಗುವಾಗ ಮೊಬೈಲ್ ದಿಜಿಟಲ್ ವಾಚ್ ಕ್ಯಾಮರಾ ಏನೂ ಕೊಂಡೊಯ್ಯುವಂತಿಲ್ಲ. ನಮ್ಮ ತಪಾಸಣೆಯಾಗಿ ಒಳಗೆ ಬಿಡುತ್ತಾರೆ. ಸೋಮನಾಥ ದೇಗುಲದೊಳಗೆ ಮೂರುಸಲ ಹೋಗಿ ಸಂದರ್ಶಿಸಿದೆವು. ಅದ್ಬುತ ಕೆತ್ತನೆಗಳಿರುವ ದೇಗುಲ. ನೋಡಿದಾಗ ಕಣ್ಮನ  ಅದರ ಸೌಂದರ್ಯವನ್ನು ಅಸ್ವಾದಿಸುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ನೋಡಬೇಕಾದ ಸ್ಥಳವಿದು. 

ಮೊಬೈಲ್ ಕೊಂಡೋಗಲು ಸಾಧ್ಯವಿಲ್ಲದ ಕಾರಣ ಪಟ ತೆಗೆಯಲು ಸಾಧ್ಯವಾಗಲಿಲ್ಲ. 

  ಸೋಮನಾಥ ದೇಗುಲ ಅಥವಾ ದೇವಪಟನ್ ಎಂದೂ ಕರೆಯಲ್ಪಡುವ ಸೋಮನಾಥ ಡೆವಾಲಯ ಗುಜರಾತಿನ ವೆರಾವಲ್ ನ ಪ್ರಭಾಸ್ ಪಟಾನ್ ನಲ್ಲಿರುವ ಹಿಂದೂ ದೇವಾಲಯ. ಇದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾಸ್ಥಳ ಹಾಗೂ ಶಿವನ ಹನ್ನೆರಡ್ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಇದು ಮೊದಲನೆಯದು ಎಂದು ಪ್ರತೀತಿ.

  ೧೧ನೇ ಶತಮಾನದಲ್ಲಿ ಮಹಮ್ಮದ್ ಘಜ್ನಿಯ ದಾಳಿಯಿಂದ ಪ್ರಾರಂಭವಾದ ಬಹು ಮುಸ್ಲಿಮ್ ಆಕ್ರಮಣಕಾರರರಿಂದ ದೇಗುಲ ಪದೇ ಪದೇ ನಾಶಗೊಂಡರೂ ದೇವಾಲಯವನ್ನು ಪುನರ್ನಿಮಿಸಲಾಗುತ್ತಿತ್ತು.

ಸತ್ಯಯುಗದಲ್ಲಿ ಸೋಮರಾಜ ಈ ದೇವಾಲಯವನ್ನು ಮೊದಲಬಾರಿಗೆ ಚಿನ್ನದಲ್ಲಿ ನಿರ್ಮಿಸಿದನು ಎಂದು ಉಲ್ಲೇಖವಿದೆ. ತ್ರೇತಾಯುಗದಲ್ಲಿ ರಾವಣ ಬೆಳ್ಳಿಯಿಂದಲೂ, ದ್ವಾಪರದಲ್ಲಿ ಕೃಷ್ಣನು ಮರದಿಂದ ನಿರ್ಮಿಸಿದನು. ಭೀಮ ಕಲ್ಲಿನಿಂದ ನಿರ್ಮಿಸಿದನು ಎಂಬುದು ಪ್ರತೀತಿ.

  ಪೌರಾಣಿಕ ಕಥೆಯ ಪ್ರಕಾರ, ದಕ್ಷ ಪ್ರಜಾಪತಿಯ ೨೭ ಹೆಣ್ಣುಮಕ್ಕಳನ್ನು ಚಂದ್ರ ವಿವಾಹವಾಗುತ್ತಾನೆ. ೨೭ ಹೆಂಡತಿಯರಲ್ಲಿ ಅವನು ರೋಹಿಣಿಗೆ ಹೆಚ್ಚು ಪ್ರೀತಿ ತೋರಿಸುತ್ತಾನೆ. ಉಳಿದವರನ್ನು ನಿರ್ಲಕ್ಷಿಸುತ್ತಾನೆ. ನಿರ್ಲಕ್ಷಿತ ಹೆಣ್ಣುಮಕ್ಕಳು ತಂದೆ ಪ್ರಜಾಪತಿಗೆ ದೂರು ಸಲ್ಲಿಸುತ್ತಾರೆ. ಮಾವ ಅಳಿಯನಿಗೆ ಬುದ್ದಿ ಹೇಳುತ್ತಾರೆ. ಆದರೆ ಚಂದ್ರ ಅದನ್ನುಪಾಲಿಸುವುದಿಲ್ಲ. ಇದರಿಂದ ಕೆರಳಿದ ಪ್ರಜಾಪತಿ ದಕ್ಷನು, ಚಂದ್ರನ ಹೊಳಪು ನಾಶವಾಗಲಿ ಎಂದು ಶಾಪ ಕೊಡುತ್ತಾನೆ. ತನ್ನ ಶಾಪ ವಿಮೋಚನೆಗೆ ಚಂದ್ರ ಪ್ರಭಾಸ್ ಪಟಾನ್ ಗೆ ಹೋಗಿ  ಶಿವನ ಮೊರೆ ಹೋಗುತ್ತಾನೆ. ಶಿವ ಚಂದ್ರನ ಶಾಪವನ್ನು ವಿಮೋಚನೆಗೊಳಿಸುತ್ತಾನೆ. ಕೃತಜ್ಞತಾಪೂರ್ವಕವಾಗಿ ಚಂದ್ರ ಅಲ್ಲಿ ಜ್ಯೋತಿರ್ಲಿಂಗವನ್ನು ಸ್ಥಾಪಿಸಿದನು. ಅದು ಸೋಮನಾಥ ದೇವಾಲಯವೆಂದು ಪ್ರಸಿದ್ಧಿ ಹೊಂದಿತು.

ಈಗಿರುವ ದೇವಾಲಯವನ್ನು ಭಾರತದ ಮೊದಲ ಗೃಹ ಸಚಿವರಾಗಿದ್ದ ವಲ್ಲಭಬಾಯಿ ಪಟೇಲ್ ಅವರ ನೇತೃತ್ವದಲ್ಲಿ ೧೯೫೧ರಲ್ಲಿ ನಿರ್ಮಿಸಲಾಗಿ, ಭಾರತದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ಉದ್ಘಾಟಿಸಲ್ಪಟ್ಟಿತು.   

 ಧ್ವನಿ ಬೆಳಕು ಪ್ರದರ್ಶನ ಅರ್ಧ ಗಂಟೆ ನೋಡಿದೆವು. ಅಮಿತಾಭ್ ಅವರ ಸ್ವರದಲ್ಲಿ ದೇಗುಲದ ಇತಿಹಾಸ ಕೇಳಿದೆವು.  ೧೦.೧೫ಕ್ಕೆ ಹೊಟೇಲ್ ಸೋಮನಾಥ ವಿಟಿಎಸ್ ತಲಪಿ ಊಟವಾಗಿ ನಿದ್ದೆ.

ಮುಂದುವರಿಯುವುದು


2 ಕಾಮೆಂಟ್‌ಗಳು: