ಇದು ನಿಸರ್ಗದ ಸೊಬಗನ್ನು ವೀಕ್ಷಿಸಲು ತೆರೆದಿರುವ ಬ್ಲಾಗ್. ನಿಸರ್ಗದ ಸೊಬಗು ಬಲು ಮನೋಹರ. ಅವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ೩ನೇ ಕಣ್ಣಿಂದ ನೋಡಿದ ಅಂಥ ಕೆಲವು ಚಿತ್ರಗಳನ್ನು ಹಾಕಲೆಂದೇ ಈ ಬ್ಲಾಗ್ ತೆರೆದಿರುವೆ. ಎಲ್ಲೇ ಹೋಗಲಿ ಕೈಯಲ್ಲಿ ಕ್ಯಾಮರ ಇದ್ದರೆ ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವ ದುರಾಭ್ಯಾಸ ಇದೆ! ಅದರಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಲು ಉದ್ದೇಶಿಸಿದ್ದೇನೆ.
ಇದರಲ್ಲಿ ಚಾರಣ ಲೇಖನ, ಪ್ರವಾಸ ಕಥನ, ಇತ್ಯಾದಿ ಲೇಖನಗಳನ್ನು ಚಿತ್ರಸಹಿತ ಹಾಕಲಾಗುತ್ತದೆ.
ಮೈಸೂರಿನಿಂದನಾವು೩೦ಮಂದಿತಾರೀಕು೨೪.೧೨.೨೨ರಂದುಬೆಳಗ್ಗೆ೬.೪೦ಕ್ಕೆಕೇರಳದವಯನಾಡು ಜಿಲ್ಲೆಯ ಎಡಕಲ್ಲುಗುಡ್ಡದಕಡೆಗೆಹೊರಟೆವು. ಗುಂಡ್ಲುಪೇಟೆಯ
ಸಿಎಂಎಸ್ಕಲ್ಯಾಣಮಂಟಪದಲ್ಲಿ೮ಗಂಟೆಗೆತಿಂಡಿ (ಇಡ್ಲಿ, ಚಟ್ನಿ, ವಡೆ) ತಿಂದೆವು. (ಮೈಸೂರಿನಿಂದಹೊರಡುವಾಗಲೇತಿಂಡಿಊಟಬಿಸಿಡಬ್ಬಗಳಲ್ಲಿಹಾಕಿತಂದಿದ್ದರು) ನಮ್ಮತಂಡದಉಮಾಅವರಪರಿಚಿತರಕಲ್ಯಾಣಮಂಟಪವದು. ಹಾಗಾಗಿಅಲ್ಲಿತಿಂಡಿಗೆಅನುಕೂಲಿಸಿದ್ದರು. ಅಲ್ಲಿ ಪರಸ್ಪರ ಪರಿಚಯ ಮಾಡಿಕೊಂಡೆವು.
ಚಹಾಕಾಫಿತಿಂಡಿಯಾಗಿಮುಂದುವರಿದುಮುತಂಗ(Muthanga)ದಲ್ಲಿತನಿಖಾಠಾಣೆಯಲ್ಲಿಮುಂದೆಕೇರಳಪ್ರವೇಶಿಸಲುಗಾಡಿಗೆಅನುಮತಿಪಡೆದುನಾವುಮುಂದುವರಿದೆವು. ಎಲ್ಲರೂನಿದ್ದೆಯಗುಂಗಿನಲ್ಲಿಇದ್ದೆವು. ಆದರೆಉಮಾಅವರಿಗೆನಮ್ಮನ್ನುನಿದ್ದೆಗಿಳಿಸಲುಮನವಾಗದೆ, ನಿದ್ದೆಮಾಡುವುದುಇದ್ದೇಇದೆ. ಈಗಏನಾದರೂಮಾಡೋಣಎಂದರು. ಯಾರೂಆಸಕ್ತಿತೋರಲಿಲ್ಲ. ಆದರೂಅವರಉತ್ಸಾಹವೇನೂಕಮ್ಮಿಯಾಗಲಿಲ್ಲ. ತನ್ನಜೀವನವಿಧಾನ, ಮದುವೆಯಸ್ವಾರಸ್ಯಘಟನೆಗಳನ್ನುಹೇಳುತ್ತಹೋದಂತೆನಮ್ಮನಿದ್ದೆಯಮಂಪರುಹಾರಿಹೋಗಿಅವರಮಾತಿಗೆಕಿವಿಯಾದೆವು. ಅವರುಮನೆಯಲ್ಲಿ ಬಟ್ಟೆ ವಿನ್ಯಾಸ ಮಾಡುವ ಅಂಗಡಿ (ಬೊಟಿಕ್) ಇಟ್ಟುಕೊಂಡಿದ್ದಾರೆ. ಅವರ ಸ್ವಂತ ದುಡಿಮೆಯಿಂದ
ನ್ಯಾನೋ ಕಾರು ಕೊಂಡಿದ್ದಾರೆ. ಅವರ ಈ ಸ್ವಾವಲಂಬೀ ಛಲ ಮೆಚ್ಚುವಂತದು. ನಾವೆಲ್ಲರೂ ಚಪ್ಪಾಳೆ ಮೂಲಕ
ಅವರಿಗೆ ಮೆಚ್ಚುಗೆ ಸೂಚಿಸಿದೆವು. ಅವರಪುಟಿದೇಳುವಉತ್ಸಾಹಕ್ಕೆತಕ್ಕನಾಗಿನಾವ್ಯಾರುಸ್ಪಂದಿಸದೆಇದ್ದದ್ದುಅವರಿಗೆತುಸುಬೇಸರತರಿಸಿರಬಹುದು. ಹಾಗೆ ಅವರು ಚಾಲಕನ ಪಕ್ಕದ ಸೀಟಿಗೆ ಹೋಗಿ ಕೂತು ಅವನು ನಿದ್ದೆ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡರು!
ಸೋಮಾವಾರ ರಜಾ ದಿನ, ಗಣರಾಜ್ಯ ದಿನ, ಮೇ ದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ, ತಿರು ಓಣಮ್ ದಿನಗಳು ರಜಾ. ಟಿಕೆಟ್ ದರ ವಯಸ್ಕರಿಗೆ ರೂ.೨೦, ಮಕ್ಕಳಿಗೆ ರೂ.೧೦
ದಾರಿಯಲ್ಲಿ ಕರಕುಶಲವಸ್ತುಗಳು, ಪುಟ್ಟು
ಮಾಡಲು ಬಿದಿರ ಅಂಡೆ, ಆಟಿಕೆಗಳು, ಉಪ್ಪುನೀರಲ್ಲಿ ಹಾಕಿಟ್ಟ ನೆಲ್ಲಿ, ಮಾವು, ಅನನಸು, ಬಿದಿರಕ್ಕಿ
ಪಾಯಸ, ತಾಜಾ ಕಾಫಿ ಪುಡಿ ಜನರ ಗಮನ ಒಮ್ಮೆ ಅತ್ತ ಸರಿದು ಏನಾದರೂ ಕೊಳ್ಳಲು ಧಾವಿಸುವಂತಾಗುತ್ತದೆ.
(ನಾನೂ ಕರಟದ ಸೌಟು, ಪುಟ್ಟು ಬಿದಿರಂಡೆ ಕಾಫಿಪುಡಿ ತೆಗೆದುಕೊಂಡೆ). ಅವೆಲ್ಲ ದಾತಿ ಮುಂದೆ ಸಾಗಿದಂತೆ
ದಾರಿಯೂ ಕಿರಿದಾಗುತ್ತದೆ. ಮೆಟ್ಟಲು ಪ್ರಾರಂಭವಾಗುತ್ತದೆ. ಗುಡ್ಡಏರಲುಈಗವ್ಯವಸ್ಥಿತಮೆಟ್ಟಲುಮಾಡಿದ್ದಾರೆ. ಸುಮಾರು ಎರಡುಕಿಮೀನಡೆದುಮೆಟ್ಟಲುಹತ್ತಿಎಡಕಲ್ಲುಗುಹೆಪ್ರವೇಶಿಸಿದೆವು. ಗುಹೆಯ ಮೇಲೆ ಎರಡು
ಬಂಡೆಗಳ ಮಧ್ಯೆ ಒಂದು ಬಂಡೆಗಲ್ಲು ನಿಂತಿದೆ. ಬೆಳಕು ಅಲ್ಲಿಂದ ಬರುತ್ತದೆ. ಅದಾಗಲೇಅಲ್ಲಿಪ್ರವಾಸಿಗರದಂಡೇಇತ್ತು.
ಭಾರತೀಸುತರ ಎಡಕಲ್ಲು ಗುಡ್ಡದ ಮೇಲೆ
ಕಾದಂಬರಿಯನ್ನು ಪುಟ್ಟಣ್ಣಕಣಗಾಲ್ ೧೯೭೩ರಲ್ಲಿ ಸಿನೆಮಾ ಮಾಡ್ದರು. ಅದರಲ್ಲಿ ಮುಖ್ಯ ಪಾತ್ರದಲ್ಲಿ
ಜಯಂತಿ, ಚಂದರಶೇಖರ, ಆರತಿ, ರಂಗ, ಶಿವರಾಂ ಅಭಿನಯಿಸಿದ್ದರು. ಎದಕಲ್ಲು ಗುಡ್ದದಲ್ಲಿ ಚಿತ್ರೀಕರಣ
ನಡೆದಿತ್ತು.
ಈ ಗುಹೆಯನ್ನು ೧೮೯೫ರಲ್ಲಿ ಮೊದಲು ಪತ್ತೆ
ಹಚ್ಚಿದವರು ಮಲಬಾರಿನ ಪೊಲೀಸ್ ಅಧಿಕಾರಿ ಫ್ರೆಡ್ ಫೌಸೆಟ್. ಗುಹೆಯಒಳಗೆಬಂಡೆಗಳಲ್ಲಿ ಶಿಲಾಯುಗದ
ನಾಗರಿಕತೆಯ ಕುರುಹಾಗಿ ನಾನಾ ಚಿತ್ರಗಳನ್ನು ಕಾಣುತ್ತೇವೆ. ಇದು ೭೦೦೦ ವರ್ಷಗಳಷ್ಟು ಹಳೆಯದಂತೆ. ಈಗಬಂಡೆಯಬುಡಕ್ಕೆಹೋಗದಂತೆತಡೆಬೇಲಿಹಾಕಿದ್ದಾರೆ. ಅಲ್ಲಿನಮ್ಮತಂಡದಪಟತೆಗೆಸಿಕೊಂಡುನಿರ್ಗಮಿಸಿದೆವು.
ವಾಹನನಿಲ್ಲಿಸಿದಸ್ಥಳಕ್ಕೆಬಂದಾಗಮಧ್ಯಾಹ್ನಗಂಟೆ೧. ಅಲ್ಲೇಊಟ (ವಾಂಗೀಭಾತ್, ಮೊಸರನ್ನಉಪ್ಪಿನಕಾಯಿ) ಪೂರೈಸಿದೆವು. ವಾಹನ ನಿಲ್ಲಿಸಲು ಮೂರು ಕಡೆ ಸ್ಥಳಾವಕಾಶ ಇದೆ.
ಕರಾಪುಳ(ಝ) (karapuzha) ಅಣೆಕಟ್ಟು, ಸಾಹಸೀ ಉದ್ಯಾನವನ
೧.೫೦ಕ್ಕೆಎಡಕಲ್ಲಿನಿಂದಹೊರಟುನಾವು ಮುಟ್ಟಿಲ್ ಕಲ್ಪೆಟ್ಟದಲ್ಲಿರುವ ಕಾರಾಪುರಅಣೆಕಟ್ಟುಪ್ರದೇಶಕ್ಕೆಬಂದೆವು. ಆತಾಣದಲ್ಲಿಪ್ರವಾಸೋದ್ಯಮದಭಾಗವಾಗಿಸುಂದರಉದ್ಯಾನವನನಿರ್ಮಿಸಿದ್ದಾರೆ. ಅಲ್ಲಿಅತ್ಯಂತಉದ್ದದಝಿಪ್ಲೈನ್ಕೂಡಇದೆ. ಪ್ರವೇಶ ಸಮಯ: ಬೆಳಗ್ಗೆ
೯ರಿಂದ ಸಂಜೆ ೬ ರ ತನಕ, ಸಂಜೆ ೪.೩೦ರ ನಂತರ ಪ್ರವೇಶವಿಲ್ಲ.
ಕರಾಪುಳ ಅಣೆಕಟ್ಟು ಕರಾಪುಳ ನದಿಯ ಎರಡೂ ಬದಿಗಳಲ್ಲಿದೆ. ಈ ಅಣೆಕಟ್ಟು ಭಾರತದ ಅತಿದೊಡ್ಡ
ಮಣ್ಣಿನ ಅಣೆಕಟ್ಟುಗಳಲ್ಲಿ ಒಂದೆಂದು ಹೆಸರು ಪಡೆದಿದೆ. ಕರಾಪುಳ ಅಣೆಕಟ್ಟಿನ ನಿರ್ಮಾಣ ೧೯೭೭ರಲ್ಲಿ
ಪ್ರಾರಂಭವಾಗಿ ೨೦೦೪ರಲ್ಲಿ ಪೂರ್ಣಗೊಂಡಿತು. ಇದು ೧೫೮ ಅಡಿ ಆಳವಿದೆ. .
ತಿರುನೆಲ್ಲಿಮಹಾವಿಷ್ಣುದೇವಾಲಯ
ನಾವುತಿರುನೆಲ್ಲಿಗೆತಲಪಿದಾಗ ೫.೩೦
ದಾಟಿತ್ತು.ದೇವಾಲಯದವತಿಯಿಂದನಡೆಸಲ್ಪಡುವಪಂಚತೀರ್ಥಮ್ ವಿಶ್ರಾಮ ಮಂದಿರದಲ್ಲಿತಂಗಲುನಮಗೆವ್ಯವಸ್ಥೆಮಾಡಿದ್ದರು. (ದಿನಕ್ಕೆರೂ.೪೦೦. ಇಬ್ಬರುಇರಬಹುದು) ಮಲಗುಕೋಣೆಯಲ್ಲಿಎರಡುಮಂಚವಿತ್ತು. ಸ್ನಾನಕ್ಕೆಬಿಸಿನೀರುವ್ಯವಸ್ಥೆಇರಲಿಲ್ಲ. ಒಂದೆರಡುಕೋಣೆಯಲ್ಲಿಇತ್ತು. ಅವಶ್ಯಪಟ್ಟವರುಅಲ್ಲಿಂದಬಿಸಿನೀರುತಂದುಸ್ನಾನಮಾಡಿದರು. ಇಲ್ಲಿ ಸುಮಾರು ೫೪ ಕೋಣೆಗಳು,
ಮೂರು ಆಧುನಿಕ ವ್ಯವಸ್ಥೆಯ ಕೋಣೆಗಳು, ಮತ್ತು ಒಂದು ಡಾರ್ಮೆಟರಿ ಇದೆ. ಸಂಪರ್ಕ ಸಂಖ್ಯೆ:
೦೪೯೩೫೨೧೦೦೫೫. ಮೈಸೂರಿನಿಂದ ಇಲ್ಲಿಗೆ ೧೨೧ ಕಿಮೀ ದೂರವಿದೆ.
ನಾವೆಲ್ಲರೂ ಶುಚೀರ್ಭೂತರಾಗಿಮಹಾವಿಷ್ಣುದೇಗುಲಕ್ಕೆಹೋದೆವು. ಬ್ರಹ್ಮಗಿರಿಯ ತಪ್ಪಲಲ್ಲಿರುವ ಪ್ರಾಚೀನದೇಗುಲ. ಸುಮಾರು೫೦೦೦ವರ್ಷದಇತಿಹಾಸವಿದೆಯಂತೆ. ದಂತಕತೆಯ ಪ್ರಕಾರ, ಬ್ರಹ್ಮತಪಸ್ಸುಮಾಡಿವಿಷ್ಣುದೇವರನ್ನುಪ್ರತಿಷ್ಠಾಪನೆಮಾಡಿರುವುದಂತೆ. ಹಂಸದ ಮೇಲೆ ಕುಳಿತುಬ್ರಹ್ಮಭುಮಿಯನ್ನು
ಸುತ್ತುತ್ತಿದ್ದಾಗ, ಬ್ರಹ್ಮಗಿರಿ ಬೆಟ್ಟದ ಸೌಂದರ್ಯಕ್ಕೆ ಮಾರು ಹೋದನು. ಅಲ್ಲಿ ಇಳಿದು ನೋಡಿದಾಗ
ಆಮಲಕ ಮರದ ಕೆಳಗೆ ವಿಷ್ಣುವಿನ ವಿಗ್ರಹ ಕಂಡಿತು. ಬ್ರಹ್ಮ ಆ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದನು.
ಬ್ರಹ್ಮನ ಕೋರಿಕೆಯಂತೆ ವಿಷ್ಣುದೇವ ಈ ಪ್ರದೇಶದ ನೀರನ್ನು ಪವಿತ್ರಗೊಳಿಸಿದನು. ಮತ್ತು ಎಲ್ಲ
ಪಾಪಗಳನ್ನು ತೊಳೆಯುವ ಸಾಮರ್ಥ್ಯವನ್ನು ಅನುಗ್ರಹಿಸಿದನು. ಹಾಗಾಗಿ ಅಲ್ಲಿರುವ ನದಿಗೆ ಪಾಪನಾಶಿನಿ
ಎಂಬ ಹೆಸರು ಬಂತು. ತರುವಾಯಚೋಳ ರಾಜ (ಕ್ರಿ.ಶ. ೯೬೨-೧೦೧೯) ಭಾಸ್ಕರ
ರವಿವರ್ಮ ಆಳ್ವಿಕೆಯಲ್ಲಿ ದೇವಾಲಯ ಅಭಿವೃದ್ಧಿಗೊಂಡಿತು. ತದನಂತರದಲ್ಲಿಮೈಸೂರಿನಒಡೆಯರ್ಅವರಸುಪರ್ದಿಯಲ್ಲಿದೇಗುಲಅಭಿವೃದ್ಧಿಹೊಂದಿದೆಎಂದುಅರ್ಚಕರುತಿಳಿಸಿದರು. ದೇಗುಲಕ್ಕೆ ನೀರು
ಬ್ರಹ್ಮಗಿರಿ ಬೆಟ್ಟದ ಬಳಿಯ ಪಾಪನಾಶಿನಿಯಿಂದ ಹರಿದು ಬರುವುದಂತೆ.
ಪ್ರಸ್ತುತದೇಗುಲದ ಜೀರ್ಣೋದ್ಧಾರನಡೆಯುವಕುರುಹಾಗಿಹೊರಪ್ರಾಂಗಣದಕಲ್ಲುಕಂಬಗಳೆಲ್ಲತೆಗೆದುಹೊಸದಾಗಿನಿರ್ಮಾಣಮಾಡುವತಯಾರಿನಡೆಯುತ್ತಲಿರುವುದುಕಂಡಿತು. ಹಳೆಯದು ಹೇಗಿತ್ತೆಂಬುದು ತಿಳಿಯಲು ಕೆಲವುಕಂಬಗಳನ್ನುತೆಗೆಯದೆಉಳಿಸಿದ್ದಾರೆ. ಸುತ್ತುಪೌಳಿಗೆನೆಲಕ್ಕೆಲ್ಲಈಗಿರುವಕಲ್ಲುತೆಗೆಸಿಗ್ರಾನೈಟ್ಶಿಲೆಹಾಕುವರಂತೆ. ಹಾಗೆಅಲ್ಲಿಒಬ್ಬರುವಿವರಿಸುತ್ತಿದ್ದರು. ಕಲ್ಲುಹಾಸಿದರೆಎಷ್ಟುಚೆನ್ನಎಂದೆನಿಸಿತು.
ಬಹಳಮಂದಿಈದೇಗುಲಕ್ಕೆಬರುವರೆಂಬುದಕ್ಕೆಸಾಕ್ಷಿಪಕ್ಕದಲ್ಲೇಇರುವಯಾತ್ರಿಮಂದಿರಸಾಕಷ್ಟುದೊಡ್ಡದಾಗಿದೆ. ಬಹುಮಹಡಿಕಟ್ಟಡದಲ್ಲಿನೂರಾರುಕೋಣೆಗಳಿವೆ. ಎಲ್ಲವೂಭರ್ತಿಯಾಗಿವೆ. ನಮ್ಮತಂಡದಮೂರುಜನರಿಗೆಭಟ್ಟರಮನೆಯಲ್ಲಿತಂಗಲುವ್ಯವಸ್ಥೆಮಾಡಿದರು. ಅವರದೂಹೋಮ್ಸ್ಟೇಇದೆ. ಕನ್ನಡಿಗರು. ನಾಲ್ಕುಮಂದಿತಂಗುವಂಥಕೋಣೆ, ಬಿಸಿನೀರುಸೌಲಭ್ಯ,, ಕಾಫಿತಿಂಡಿಊಟದವ್ಯವಸ್ಥೆಯೂಇದೆ. (ಕೆ.ಎಲ್.ಎಸ್.ಎನ್. ಶರ್ಮ, ಶ್ರೀ ದುರ್ಗಾ ಹೋಂಸ್ಟೇ, ಸಂಪರ್ಕ ಸಂಖ್ಯೆ: +೯೧೯೬೦೫೧೩೧೨೯೦,
+೯೧೯೪೪೭೩೪೦೮೫೨, ಕೋಣೆಗೆ ದಿನವೊಂದರರೂ.೯೦೦)
ಬೆಳಗ್ಗೆ೬ಗಂಟೆಗೇಎಲ್ಲರೂತಯಾರಾದೆವು. ವಿಷ್ಣುಪಾದದಲ್ಲೇತಿಂಡಿತಿಂದೆವು. ಕೇರಳದಖ್ಯಾತತಿಂಡಿಪುಟ್ಟು, ಕಡ್ಲೆಗಸಿ. ಅದನ್ನೇತಿಂದು, ಮಧ್ಯಾಹ್ನಕ್ಕೆಡಬ್ಬಕ್ಕೂ ತುಂಬಿಕೊಂಡೆವು. ೭ಗಂಟೆಗೆನಾವುಅಲ್ಲಿಂದಹೊರಟುಬ್ರಹ್ಮಗಿರಿಹತ್ತಲುಅರಣ್ಯಭವನದಬಳಿಗೆಹೋದೆವು. ೭.೩೦ ದಾಟಿದರೂ ಅರಣ್ಯ ಕಚೇರಿ ಇನ್ನೂ ಬಾಗಿಲು ತೆರೆದಿರಲಿಲ್ಲ. (ನಮ್ಮ ತಂಡದಲ್ಲಿ ಇಬ್ಬರು ಉಮಾ ಇದ್ದರು. ಒಬ್ಬ ಉಮಾ ಅವರು ರೀಲ್ ಮಾಡುವುದರಲ್ಲಿ ನಿಸ್ಸೀಮರು. ಅವಕಾಶ ಸಿಕ್ಕಿದಲ್ಲೆಲ್ಲ ಹೀಗೆ ಮಾಡಿ ಹಾಗೆ ಮಾಡಿ ಎಂದು ಕಾಲು ಕುಣಿಸಿಸಿ ವೀಡಿಯೋ ಮಾಡುತ್ತಲಿದ್ದರು. ಹಾಗಾಗಿ ಅವರಿಗೆ ರೀಲ್ ಉಮಾ ಎಂಬ ಅಡ್ಡ ಹೆಸರನ್ನಿಟ್ಟೆವು) ಹೊತ್ತು ಕಳೆಯಲು ಉಮಾ ಅವರು ರೀಲ್ ಮಾಡಿಸುತ್ತಿದ್ದರು. ಉದಾಹರಣೆಗೆ ಇಲ್ಲಿ ಒಂದು ರೀಲ್ ಇದೆ ನೋಡಿ. ಬಿಳಿ ಬಣ್ಣದ ದೊಡ್ಡ ಟೊಪ್ಪಿ ದೊರೆಸಾನಿಯೇ ಉಮಾ.
ಬ್ರಹ್ಮಗಿರಿ ಪ್ರವೇಶ: ೭.೩೦ರಿಂದ೯.೩೦ತನಕ. ರಜಾ ದಿನ ಸೋಮಾವಾರ ಹಾಗೂ ಶುಕ್ರವಾರ. ಪ್ರವೇಶದರ: ೧ರಿಂದ೫ಮಂದಿಗೆ ರೂ. ೨೩೫೫, ಹೆಚ್ಚುವರಿತಲಾರೂ. ೩೭೫. ಹಾಗಾಗಿ ಗುಂಪಿನಲ್ಲಿ ಹೋಗುವುದೇ ಒಳ್ಳೆಯದು. ಮಾರ್ಗದರ್ಶಿಇಲ್ಲದೆಹೋಗಲುಬಿಡುವುದಿಲ್ಲ. ಅವರಿಗೆ ರೂ. ೨೦೦ ಕೊಡಬೇಕು. ಬ್ರಹ್ಮಗಿರಿ ಹತ್ತುವವರೆಲ್ಲರೂಅರಣ್ಯಕಛೇರಿಯಲ್ಲಿಕೊಡುವಪತ್ರದಲ್ಲಿಹೆಸರುವಯಸ್ಸುಬರೆದುಸಹಿಹಾಕಬೇಕು. ಈಎಲ್ಲಪ್ರಕ್ರಿಯೆಮುಗಿಸಿ೮.೨೦ಕ್ಕೆನಾವುನಾಲ್ಕುಮಂದಿಮಾರ್ಗದರ್ಶಿಗಳೊಡನೆಬ್ರಹ್ಮಗಿರಿಹತ್ತಲುಹೊರಟೆವು. ಸುತ್ತಕಾಡುಮಧ್ಯೆರಸ್ತೆ . ಕಾಡಿನದಾರಿಯಲ್ಲಿಅಲ್ಲಲ್ಲಿಆನೆಲದ್ದಿಕಂಡೆವು. ಹುಲಿ, ಆನೆ, ಜಿಂಕೆ, ಇತ್ಯಾದಿಪ್ರಾಣಿಗಳುಅಲ್ಲಿಯಕಾಡಿನಲ್ಲಿಇವೆಯಂತೆ. ಸದ್ದುಮಾಡದೆಬನ್ನಿ. ದೂರದಲ್ಲಿಆನೆಇರುವಹಾಗಿದೆಎಂದುನಮ್ಮಮಾರ್ಗದರ್ಶಿಹೇಳಿದರು. ಪ್ರಾಣಿಗಳುಹತ್ತಿರದಲ್ಲೇಎಲ್ಲೇಇದ್ದರೂಅವುಗಳವಾಸನೆಯಲ್ಲೇಅವರಿಗೆಗೊತ್ತಾಗಿಬಿಡುತ್ತದಂತೆ. ಅವರಿಗೆಕನ್ನಡಬರುತ್ತಲಿತ್ತು. ಅವರುಮೈಸೂರು, ಗೋಣಿಕೊಪ್ಪಇತ್ಯಾದಿಕರ್ನಾಟಕದಲ್ಲಿಕೆಲಸಮಾಡಿದ್ದರಂತೆ. ಹಾಗಾಗಿಕನ್ನಡಗೊತ್ತುಎಂದರು.
ಬ್ರಹ್ಮಗಿರಿ ಸಮುದ್ರಮಟ್ಟದಿಂದ ೧೬೦೭ಮೀಟರ್ ಎತ್ತರದಲ್ಲಿದೆ. ಬ್ರಹ್ಮಗಿರಿಯನ್ನು ೧೯೭೪ ಜೂನ್ ೫ರಂದು ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಪ್ರದೇಶದಲ್ಲಿ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಅರಣ್ಯ ಹೊಂದಿದೆ. ಎತ್ತರದಲ್ಲಿ ಶೋಲಾ ಕಾಡು, ಹುಲ್ಲುಗಾವಲನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ತದ ಮೇಲ್ಭಾಗ ೧೮೧ ಚದರ ಕಿಮೀ ವಿಸ್ತೀರ್ಣ ಹೊಂದಿದೆ. ಬ್ರಹ್ಮಗಿರಿ ಉತ್ತರದಲ್ಲಿ ಕರ್ನಾಟಕರಾಜ್ಯದ ಕೊಡಗು ಜಿಲ್ಲೆ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಗಡಿಯಲ್ಲಿದೆ. ದಶಂಬರದಿಂದ ಫೆಬ್ರವರಿ ವರೆಗೆ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಆಗ ಜಿಗಣೆ ಕಾಟ ಇರುವುದಿಲ್ಲ.
ನಾವುನಿಧಾನವಾಗಿಯೇಸಾಗಿದೆವು. ಅಲ್ಲಿಂದಮತ್ತೆಮರಗಳಿಲ್ಲ. ಹುಲ್ಲುಗಾವಲಿನಪ್ರದೇಶ. ನೆಲ್ಲಿಗಿಡಗಳುಸಾಕಷ್ಟುಕಂಡೆವು. ಗುಡ್ಡಹತ್ತುವಾಗ, ಕೆಲವುಪ್ರಾಣಿಗಳಉತ್ತಿಷ್ಠಕಂಡೆವು. ಮುಳ್ಳುಹಂದಿ, ಕಾಡು ಬೆಕ್ಕು ಇವುಗಳದ್ದಾಗಿರಬಹುದು ಎಂದು ತಿಳಿದವರು ಹೇಳಿದರು. ಅಲ್ಲಿ ಚಿತರೆ, ಹುಲಿ, ಆನೆ, ಜಿಂಕೆ, ಮುಳ್ಳುಹಂದಿ, ಕಾಡುಬೆಕ್ಕು, ಕಾಡು ಮೊಲ, ವನ್ಯ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆಯಂತೆ.
ಒಟ್ಟುಮೂರುಗುಡ್ಡಹತ್ತಿದಾಗಬ್ರಹ್ಮಗಿರಿತುದಿತಲಪಿದೆವು. ಮಂಜುಸಾಕಷ್ಟಿತ್ತು. ಆಗಾಗನಮ್ಮನ್ನುಮುತ್ತಿಕ್ಕಿಚದುರುತ್ತಲಿತ್ತು. ಬ್ರಹ್ಮಗಿರಿತುದಿಯಿಂದಒಂದುಬದಿಕೇರಳ, ಇನ್ನೊಂದುಬದಿಕರ್ನಾಟಕಕ್ಕೆಸೇರಿದೆ. ಕರ್ನಾಟಕದಿಂದಸೋಮವಾರಪೇಟೆಯಇರ್ಪುಕಡೆಯಿಂದದಾರಿ. ಕೇರಳದಿಂದತಿರುನೆಲ್ಲಿಕಡೆಯಿಂದಪ್ರವೇಶ. ಈಗಕರ್ನಾಟಕದಿಂದಪ್ರವೇಶನಿಷೇಧಿಸಿದ್ದಾರಂತೆ. ನಾವು೨೦೧೬ರಲ್ಲಿಹೋಗಿದ್ದೆವು. ಕೊಡಗಿನ ಕಡೆಯಿಂದ ದಟ್ಟ ಅರಣ್ಯ (ಹಳೆಯ ಪಟ ನೋಡಿದಾಗ ಅನಿಸಿತು.) ಇದೆ.
ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಬಳಿ ಹುಳಗಳು ಕಂಡುವು. ಕಾಲಡಿಗೆ ಸಿಗದಂತೆ ನೋಡುತ್ತ ಹೆಜ್ಜೆ ಇಟ್ಟೆವು. ಕಾಡು ಹೂಗಳ ಸಂಖ್ಯೆ ವಿರಳವಾಗಿತ್ತು
ಅಲ್ಲಿ ನೀರು ಪೈಪಿನಲ್ಲಿ ಬರುತ್ತಲಿತ್ತು. ಅದನ್ನು ಕುಡಿದೆವು. ವಿಷ್ಣು ದೇವಾಲಯಕ್ಕೆ ಇದೇ ನೀರಂತೆ. ಯಾರೂ ಅಲ್ಲೇ ಮುಖ ತೊಳೆದುಕೊಳ್ಳಬೇಡಿ. ನೀರು ಬಾಟಲಿಯಲ್ಲಿ ತೆಗೆದುಕೊಂಡು ಈಚೆ ಬಂದು ಮುಖ ತೊಳೆಯಿರಿ. ದೇವರ ಅಭಿಷೇಕಕ್ಕೆ ಕೂಡ ಬಳಸುತ್ತಾರೆ. ಯಾರೂ ನೀರನ್ನು ಮಲಿನಗೊಳಿಸಬೇಡಿ ಎಂದು ಮಾರ್ಗದರ್ಶಿಯೊಬ್ಬ ಹೇಳಿದ.
ಎಲ್ಲರೂಇಳಿದಬಳಿಕಅಲ್ಲಿತಂಡದಪಟತೆಗೆಸಿಕೊಂಡುಬೇಗನೆಹೊರಟೆವು. ಮಳೆಯಸೂಚನೆಕಾಣುತ್ತಲಿತ್ತು. ಎರಡುಹನಿಹಾಕಿ ಮಾಯವಾಯಿತು.ಕಾಡುಪ್ರಾಣಿಗಳುಹತ್ತಿರದಲ್ಲಿಇವೆಯೋಎಂದುಮೈಯೆಲ್ಲಕಣ್ಣಾಗಿನೋಡಿನಾಲ್ವರುಮಾರ್ಗದರ್ಶಿಗಳುಎಚ್ಚರದಿಂದಸುರಕ್ಷಿತವಾಗಿನಮ್ಮನ್ನು ಗಿರಿಇಳಿಸಿಗಮ್ಯಸ್ಥಾನಕ್ಕೆಕರೆತಂದರು. ೩.೩೦ಗೆನಾವುಕೆಳಗೆಇಳಿದಿದ್ದೆವು. ಅಲ್ಲಿ ದೈತ್ಯ ಅಳಿಲು ಕೆಂದಳಿಲನ್ನು ಕಂಡೆವು. ನಾಲ್ಕೈದು ಅಳಿಲುಗಳು ಮರದಿಂದ ಮರಕ್ಕೆ ನೆಗೆಯುತ್ತಲಿದ್ದುವು.
ಮರಳಿಮೈಸೂರು
ಅಲ್ಲಿಂದಹೊರಟವರುದಾರಿಯಲ್ಲಿಚಾಕಾಫಿ, ಪಕೋಡಸೇವಿಸಿಸೀದಮೈಸೂರಾಭಿಮುಖರಾದೆವು. ೮ಗಂಟೆಗೆಮನೆತಲಪಿದೆವು. ಪ್ರಕೃತಿದಂಪತಿವ್ಯಾನ್ಇಳಿದಲ್ಲಿಂದಮನೆತನಕಬಿಟ್ಟರು. ಅವರಿಗೆಧನ್ಯವಾದ. ಈಎರಡುದಿನದಚಾರಣವನ್ನು ಯೂಥ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದಆಯೋಜಿಸಿ, ಯಶಸ್ವಿಯಾಗಿಸಂಪನ್ನಗೊಳಿಸಿದವರುಆನಂದಗುಪ್ತಹಾಗೂಕೃಷ್ಣಹೆಬ್ಬಾರರು. ಅವರಿಗೆನಮ್ಮಎಲ್ಲಸಹಚಾರಣಿಗರಪರವಾಗಿಧನ್ಯವಾದ.
ಈಚಾರಣದಲ್ಲಿಸುಮಾರುಮಂದಿಹೊಸಬರಪರಿಚಯಸ್ನೇಹಲಭಿಸಿತು.
ಕೊಲಾಜಿನಲ್ಲಿ ಬಳಸಿದ ಕೆಲವು ಚಿತ್ರಗಳ ಕೃಪೆ ಸಹಚಾರಣಿಗರದು. ಅವರೆಲ್ಲರಿಗೂ ಧನ್ಯವಾದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ