ಸೋಮವಾರ, ನವೆಂಬರ್ 21, 2022

ಮೈಸೂರಿನಿಂದ ಕುದುರೆಮುಖ ಶಿಖರದೆಡೆಗೆ

 ಕುದುರೆಮುಖ ಶಿಖರ ಏರಬೇಕು ಎಂಬ ಬಯಕೆ ಕಳೆದ ಏಳೆಂಟು ವರ್ಷಗಳಿಂದಲೇ ಇತ್ತು. ಅದನ್ನು ಈಡೇರಿಸಿದ್ದು ಯೂಥ್ ಹಾಸ್ಟೆಲ್ ಮಂಗಳೂರು ಶಾಖೆ. ಕುದುರೆಮುಖ, ನೇತ್ರಾವತಿ ಗುಡ್ಡ, ಮೇರುತಿ ಗುಡ್ಡ ಮೂರು ದಿನದ ಚಾರಣ ಇದೆ ಎಂದು ಜುಲೈ ತಿಂಗಳಲ್ಲಿಯೇ ಶಂಕರ  ಅವರು ವಾಟ್ಸಪ್ ಮೂಲಕ ಮಾಹಿತಿ ಕಳುಹಿಸಿದರು

Dear participants,

Due to administrative reasons, following changes are made to the forthcoming state level trekking schedule.

10/11/22 - Reporting after 3.00 pm

11/11/22 - Trek to Kudremukh Peak 18 kms

12/11/22 - Trek to Nethravathi Peak 12 kms

13/11/22 - Trek to Meruti Peak 16 kms

Meruti Peak route was slightly changed due to technical reason. Hence, there is an increase of 4 kms trek. It will be around 16 kms trek now instead of 12 kms.

However, these may also undergo changes subject to last minute directions from forest department.

All the three routes are tough and request all of you  to get yourself prepared for these treks. Start  walking, jogging, swimming, Trekking, yoga, meditation and practice pranayams every day now onwards.

Team YHAI Mangaluru)

ಕೂಡಲೇ ಗೆಳತಿ ಮಂಜುಳಾ ಹಾಗೂ ನಾನು ಹಣ (ರೂ.೪೫೦೦) ಪಾವತಿಸಿ ನೋಂದಾಯಿಸಿಕೊಂಡೆವು

ತಾರೀಕು ೧೦.೧೧.೨೦೨೨ರಂದು ಮೈಸೂರಿನಿಂದ ಮಂಜುಳಾ, ಸಂಕಲ್ಪ ಹಾಗೂ ನಾನು ಬೆಳಗ್ಗೆ ಗಂಟೆಯ ಹಾಸನ ಬಸ್ (ರೂ. ೧೨೬) ಹತ್ತಿದೆವು. ೧೧ ಗಂಟೆಗೆ ಹಾಸನ ತಲಪಿದೆವು. ಅಲ್ಲಿಂದ ೧೨ ಗಂಟೆಗೆ ಕಳಸಕ್ಕೆ ಹೋಗಲು ಹೊರನಾಡು ಬಸ್ (ರೂ.೧೪೦) ಹತ್ತಿದೆವು. ಮೂಡಿಗೆರೆಯಲ್ಲಿ ಊಟಕ್ಕೆ ನಿಲ್ಲಿಸಿದರು. ಸೆಟ್ ದೋಸೆ (ರೂ. ೫೦) ತಿಂದೆವು. ಕಳಸದಲ್ಲಿ ಇಳಿದಾಗ ಸಂಜೆ ಗಂಟೆಅಲ್ಲಿಂದ .೩೦ಗೆ ಸಂಸೆಗೆ (ರೂ. ೧೬) ಬಸ್ ಹತ್ತಿದೆವು. ಕಳಸ ಸಂಸೆ ದಾರಿಯಲ್ಲಿ ಸಾಗುತ್ತಿರಬೆಕಾದರೆ ಚಹಾತೋಟಗಳ ಸುಂದರ ದೃಶ್ಯ ಗಮನ ಸೆಳೆಯುತ್ತವೆ.  ಸಂಸೆಯಲ್ಲಿ ಧರ್ಮಸ್ಥಳ ಸಂಸ್ಥೆಯವರ ತ್ರೈರತ್ನ ಭವನದೆದುರು ಇಳಿದಾಗ ಗಂಟೆ ಅಲ್ಲಿ ನಮ್ಮ ವಾಸ್ತವ್ಯ. ಪುನರ್ಪುಳಿ ಷರಬತ್ತು ಕೊಟ್ಟು ಹಾರ್ದಿಕ ಸ್ವಾಗತ ದೊರೆಯಿತುಚಹಾ, ಕಾಫಿ ಚಟ್ಟಂಬಡೆ, ಸಿಹಿ ಎರಿಯಪ್ಪ ಸವಿದೆವುತ್ರೈರತ್ನ ಭವನದಲ್ಲಿ ಮಹಡಿ ಮೇಲೆ ಎರಡು ಕೋಣೆ, ಕೆಳಗೆ ಸಭಾ ಮಂಟಪದಲ್ಲಿ ಹಾಗೂ ವಧೂವರರ ಕೋಣೆಗಳಲ್ಲಿ ಹೆಂಗಸರಿಗೆ, ಹಾಗೂ ಗಂಡಸರಿಗೆ ದೊಡ್ಡ ಸಭಾಭವನದಲ್ಲಿ ಮಲಗಲು ಚಾಪೆ ರಗ್ಗು ಹಾಕಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು. ಮೊಬೈಲ್ ಚಾರ್ಜು ಮಾಡಲು ಸಾಕಷ್ಟು ಪ್ಲಗ್ ವ್ಯವಸ್ಥೆ ಮಾಡಿದ್ದರು. ಹೆಂಗಸರಿಗೆ ಪಾಯಿಖಾನೆ ಬಚ್ಚಲುಮನೆ ಬಿಸಿನೀರು ಇತ್ತು.

 ನೋಂದಣಿ ಪರಿಶೀಲನೆಗುರುತು ಚೀಟಿ, ಬೆನ್ನಚೀಲ, ಟೊಪ್ಪಿ ಕೊಟ್ಟರು.

 ಸಂಜೆ ಹೊತ್ತಲ್ಲಿ ಎಲ್ಲರನ್ನೂ ಸೇರಿಸಿ, ಕೆಲವು ವಿನೋದ ಆಟಗಳನ್ನು ಆಡಿಸಿ,  ಗಿರಿಧರ ಕಾಮತ್ ಅವರು ಎಲ್ಲರ ಸಂಕೋಚ ಹರಿದು ಆತ್ಮೀಯ ಭಾವವನ್ನು ತುಂಬಿ,  ಪರಸ್ಪರ ಪರಿಚಯ ಕಾರ್ಯವನ್ನು ವಿನೂತನವಾಗಿ  ಸೊಗಸಾಗಿ ನಡೆಸಿಕೊಟ್ಟರು. ಸಣ್ಣದಾಗಿ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಇಲಾಖೆಯ ಜ್ಯೋತಿ ಹಾಗೂ ತ್ರೈರತ್ನಭವನದ ವ್ಯವಸ್ಥಾಪಕರೂ, ಗ್ರಾಮಪಂಚಾಯತು ಸದಸ್ಯರೂ ಆದ ಪ್ರಕಾಶ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದ ಕಲಾಪ ಮುಗಿದ ಬಳಿಕ ಊಟ.ಅನ್ನ ಸಾರು, ಬೀಟ್ರೂಟ್ ಪಲ್ಯ, ಸಾಂಬಾರು, ಹಪ್ಪಳ, ಪಲಾವ್, ಮೊಸರು ಗೊಜ್ಜು. ಹೆಸರು ಬೇಳೆ ಪಾಯಸ, ನೇಂದ್ರ ಬಾಳೆಹಣ್ಣು. ಸ್ನಾನವಾಗಿ ನಿದ್ದೆನಾಳೆಯ ಚಾರಣಕ್ಕೆ ಚೆನ್ನಾಗಿ ನಿದ್ದೆ ಮಾಡಿ ತಯಾರಾಗಬೇಕು ಎಂದು ೧೦ ಗಂಟೆಗೆ ದೀಪ ಆರಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ನನಗೆ ನಿದ್ರಾ ದೇವಿ ಕರುಣೆ ತೋರಿಸಲಿಲ್ಲ. ಗಂಡಸರು ಮಲಗಿದಲ್ಲಿಂದ ತರಹೇವಾರಿ ಗೊರಕೆಯ ಸದ್ದು ಭಯಂಕರವಾಗಿ ಕೇಳಿಸುತ್ತಲಿತ್ತು. ಗೊರಕೆಯ ದೆಸೆಯಿಂದ ವಿವಾಹ ವಿಚ್ಛೇದನ ಆಗಿದ್ದ ಬಗ್ಗೆ ಓದಿದ್ದೆ. ಇಷ್ಟು ಸಣ್ಣ ವಿಷಯಕ್ಕೆ ಅಷ್ಟು ದೊಡ್ಡ ತೀರ್ಮಾನವೇ ಎಂದು ಚಿಂತಿಸಿದ್ದಿತ್ತು. ಹೌದು ತರಹದ ಗೊರಕೆಯಿಂದ ವಿಚ್ಛೇದನ ಆದರೂ ಆಗಬಹುದು ಎಂದು ಮನವರಿಕೆಯಾಯಿತು! ಬೆಳಗಿನ ಝಾವ ಸುಮಾರು .೩೦೩ರ ಸಮಯದಲ್ಲಿ ಮೂಗಿಗೆ ಒಗ್ಗರಣೆ ಪರಿಮಳ ಬಂತು. ಏನಾಶ್ಚರ್ಯ ಗೊರಕೆಯ ಸದ್ದೂ ನಿಂತಿತ್ತು.
೧೧.೧೧.೨೨ರಂದು ಬೆಳಗ್ಗೆ ನಾಲ್ಕು ಗಂಟೆಗೆ ಘಂಟಾನಾದ ಮೊಳಗಿತು. ಎಲ್ಲರೂ ಏಳಬೇಕೆಂಬ ಸೂಚನೆ. ಎದ್ದು ತಯಾರಾದೆವು. .೧೫ಕ್ಕೆ ಚಹಾ, ಬಿಸಿನೀರು. .೧೫ಕ್ಕೆ ತಿಂಡಿ ಒತ್ತು ಶ್ಯಾವಿಗೆ, ಗಸಿ, ನೇಂದ್ರಹಣ್ಣು ಎಂಚಿನವ, (ಸಕ್ಕರೆಪಾಕಕ್ಕೆ ನೇಂದ್ರಬಾಳೆಹಣ್ಣು ಹೆಚ್ಚಿಹಾಕಿ, ಏಲಕ್ಕಿ ಘಮ ಬೆರೆಸಿ. ಈ ಹೆಸರು ನಾನು ಇದೇ ಪ್ರಥಮ ಬಾರಿ ಕೆಳುವುದು. ಬಹುಶಃ ಹೀಗೊಂದು ಖಾದ್ಯ ತಯಾರಿಸಿದಾಗ ಮನೆಯವರು ಯಾರೋ ತುಳುವಿನಲ್ಲಿ ಎಂಚಿನವು (ಏನಿದು) ಎಂದು  ಕೇಳಿರಬಹುದು. ಹಾಗೆ ಅದಕ್ಕೆ ಎಂಚಿನವ ಎಂದು ಹೆಸರಿಟ್ಟಿರಬಹುದು ಎಂದು ಕಲ್ಪನೆ ಮಾಡಿಕೊಂಡೆ!)  ಪೊಂಗಲ್.  .ಶ್ಯಾವಿಗೆ ನೋಡಿ, ಅಬ್ಬ ನಿಜಕ್ಕೂ ದಂಗಾದೆ. ಅಷ್ಟು ಜನರಿಗೆ (ಸುಮಾರು ೧೪೫ ಮಂದಿಗೆ) ಕೇವಲ ಮೂರು ಮಂದಿ ಅಡುಗೆಯವರು ಶ್ಯಾವಿಗೆ ಮಾಡಿದರಲ್ಲ. ಬೆಳಗ್ಗೆ ಸುಮಾರು ಮೂರು ಗಂಟೆಗೆ ತಿಂಡಿ ತಯಾರಿ ಮಾಡುತ್ತಾರಲ್ಲಅವರಿಗೆ ತಲೆಬಾಗಿ ಸಲಾಂ.

  ಬುತ್ತಿಗೆ ಪಲಾವ್ ತುಂಬಿ ೬ ಗಂಟೆಗೆ ತಯಾರಾಗಿ .೩೦ಗೆ ಹೊರಟೆವು. ಪಿಕಪ್ ಜೀಪಿನಲ್ಲಿ ನಮ್ಮ ಮೆರವಣಿಗೆ ಸುಮಾರು ಕಿಮೀ ಸಾಗಿ ಕುದುರೆಮುಖ ಶಿಖರ ಹತ್ತುವ  ದಾರಿ ಮುಳ್ಳೋಡಿಗೆ  ತಲಪಿದೆವು. ೬ಕಿಮೀ ಮಾರ್ಗದಲ್ಲಿ ಮೂರು ಕಿಮೀ ಮಣ್ಣುರಸ್ತೆ ಬದಲು ಹೊಂಡವೇ ಕಾಣುತ್ತಲಿತ್ತು. ದಾರಿಯಲ್ಲಿ ಜೀಪ್ ಸವಾರಿಯಲ್ಲಿ ಜೀಪಿನ ಕಬ್ಬಿಣದ ಸಲಾಕೆಗಳು ಸೊಂಟಕ್ಕೆ ಜಜ್ಜಿ ನೋವು ಕೊಡುತ್ತಲಿತ್ತು. ನಮ್ಮದೇನೋ ಒಂದು ದಿನದ ಪಯಣ. ಆದರೆ ಅಲ್ಲಿಯ ನಿವಾಸಿಗಳು ರಸ್ತೆಯಲ್ಲಿ ದಿನಾ ಹೇಗೆ ಪಯಣಿಸುವರೋ ಎಂಬ ಭಾವನೆ ಕಾಡಿ ಅವ್ಯವಸ್ಥೆಯ ಬಗ್ಗೆ ವಿಷಾದವಾಯಿತು

ಅಲ್ಲಿ ಜೀಪಿಳಿದು ನಡಿಗೆ ಸುರುಮಾಡಿದಾಗ ಗಂಟೆ .೧೫. ಕಾಫಿ ತೋಟ ಹಾದು ಮುಂದೆ ಶೋಲಾ ಕಾಡಿನಲ್ಲಿ ನಡೆದೆವು. ನಮ್ಮೊಂದಿಗೆ ಆರೇಳು ಮಂದಿ ಮಾರ್ಗದರ್ಶಕರು ಇದ್ದರು. ಮಂಗಳೂರು ತಂಡದ ೧೦ ಮಂದಿ ಸ್ವಯಂಸೇವಕರು (ಸಮವಸ್ತ್ರ ಧರಿಸಿ) ನಮ್ಮ ತಂಡವನ್ನು ಮುನ್ನಡೆಸಿದರು ನಡಿಗೆ ಏರು ದಾರಿ. ನಿಧಾನವೇ ಪ್ರಧಾನವಾಗಿ ಸುಮಾರು ಕಿಮೀ ನಡೆದಾಗ, ಇನ್ನು ಎಷ್ಟು ದೂರ ಎಂಬ ಉದ್ಗಾರ ಹೊರಟಿತು. ಇನ್ನೇನು ಸಮತಳ ಬರುತ್ತದೆ. ಇಷ್ಟು ಕಷ್ಟವಿಲ್ಲ ಎಂದಾಗ ನಡೆಯಲು ಹುರುಪು. ಎತ್ತ ನೋಡಿದರೂ ಭೂಮಿತಾಯಿ ಹಸುರುಡುಗೆ ತೊಟ್ಟು ನಿಂತ ನೋಟ ಬಲು ಅಪ್ಯಾಯಮಾನ. ನಿಸರ್ಗದ ಸುಂದರ ದೃಶ್ಯ ನೋಡುತ್ತ, ಸತ್ತಮೇಲೆ ಸ್ವರ್ಗಕ್ಕೆ ಹೋಗುವ ಮಾತು ದೂರಾಲೋಚನೆ. ಅದೇ ಬದುಕಿರುವಾಗಲೇ ಸ್ವರ್ಗಸುಖ ಲಭಿಸಬೇಕೆಂದಾದರೆ ಹೀಗೆ ಸುಂದರ ತಾಣಕ್ಕೆ ಚಾರಣ ಕೈಗೊಳ್ಳಬೇಕು. ನಾವೆಷ್ಟು ಅದೃಷ್ಟವಂತರು, ನಮಗೆ ಅವಕಾಶ ಸಾಧ್ಯವಾಗಿದೆ ಎಂದು ನಾನು ಹಾಗೂ ಪಾಂಡುರಂಗ ಕಿಣಿ ಮಾತಾಡಿಕೊಂಡೆವು

                                        

ಕ್ರಮೇಣ ಸೂರ್ಯನೂ ತನ್ನ ತಾಪವನ್ನು ಹೆಚ್ಚಿಸಲು ತೊಡಗಿದ್ದ. ಕಾಡೊಳಗೆ ಅಲ್ಲಲ್ಲಿ   ಮುಂದಿನ ದಾರಿ ಹಾಗೂ ಎಷ್ಟು ಕಿಮೀ ಕ್ರಮಿಸಬೇಕು ಎಂಬ ಬಗ್ಗೆ ಫಲಕ ಹಾಕಿದ್ದರು. ಅದನ್ನು ನೋಡುತ್ತ, ಗುರಿಮುಟ್ಟುವ ಎಡೆಗೆ ಮುನ್ನುಗ್ಗುತ್ತ ನಡೆಯುತ್ತಲಿದ್ದೆವು.


 

 ಂದೆರಡು ಕಡೆ ನೀರ ತೊರೆಗಳು, ಸಣ್ಣ ಜಲಪಾತ ಹಾದು ನಡೆದೆವು.  ಒಂಟಿಮರ ಎದುರಾಯಿತು. 


  ಮುಂದೆ ದೂರದಲ್ಲಿ ೯೦ ಡಿಗ್ರಿ ಏರು ದಾರಿಯಲ್ಲಿ ಮುಂದೆ ಹೋಗಿದ್ದವರು ಹತ್ತುವುದು ಕಂಡು ಎದೆ ಧಸಕ್ಕೆಂದಿತು. ಏನಾದರೂ ಸೈ ಗುರಿಮುಟ್ಟುವುದೇ ಎಂಬ ಭಾವನೆ ದೃಢವಾಗಿ, ನಿಧಾನದಲ್ಲಿ ಹತ್ತಬಹುದು ಎಂದು ಮನದಲ್ಲೇ ಹೇಳಿಕೊಂಡು ಗುಡ್ಡದ ಬಳಿ ಬಂದಾಗ ದೂರದಿಂದ ಕಂಡಷ್ಟು ಕಷ್ಟವಿಲ್ಲ ಎಂದು ಅನಿಸಿತು.



                                       
                                       
ನಿಧಾನವಾಗಿ ನಡೆದು, ಸುತ್ತ ಪ್ರಕೃತಿಯ ಸಿರಿಯನ್ನು ಕಣ್ಣುತುಂಬಿಕೊಳ್ಳುತ್ತ ಗುಡ್ಡ ಏರಿಯೇ ಬಿಟ್ಟೆವು. ಅಂತೂ ೧೧.೫೫ಕ್ಕೆ ಕುದುರೆಮುಖ ಶಿಖರ ತಲಪಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಮೇಲೆ ವಿಶಾಲವಾದ ಸ್ಥಳವಿದೆ. ಅಲ್ಲಿ ಒಂದು ಏಂಟೆನಾ ಹಾಗೂ ಕುದುರೆಮುಖ ಹಾಗೂ ಇನ್ನಿತರ ಗುಡ್ಡಗಳ ಎತ್ತರದ ಬಗ್ಗೆ ಫಲಕ ಇದೆ. ಮೇಲಿಂದ ಸುತ್ತ ಶೋಲಾಕಾಡು ಬಹಳ ಚೆನ್ನಾಗಿ ಕಾಣುತ್ತಲಿತ್ತು. ಈಗಿನ ಮಕ್ಕಳು ತಲೆ ಕ್ಷಔರ ಮಾಡಿಸಿಕೊಳ್ಳುತ್ತಾರಲ್ಲ ಹಾಗಿದೆ ಎಂದು ಸುಷ್ಮಾ  ಅದಕ್ಕೆ ಉಪಮೆ ಕೊಟ್ಟರು! 

 

ಮಳೆಗಾಲವಾದ್ದರಿಂದ ಗುಡ್ಡಗಳು ಹಸುರುಬಣ್ಣದಲ್ಲಿ ಶೋಭಿಸುತಲಿದ್ದುವು. ಕಣ್ಣಿಗೆ ತಂಪು ಈ ಗಿರಿಧಾಮ.  ಅಲ್ಲಿ ಊಟ ಮಾಡಿ, ತುಸು ವಿರಮಿಸಿ ತಂಡದ ಪಟ ತೆಗೆಸಿಕೊಂಡೆವು.

ಬೇರೆ ಚಾರಣಿಗರು ಕೆಲವೇ ಮಂದಿ ಇದ್ದರಷ್ಟೆ. ನಾವು ೧೨೭ ಮಂದಿಯಲ್ಲಿ ೯೮ ಮಂದಿ ಶಿಖರ ಏರುವಲ್ಲಿ ಯಶ ಸಾಧಿಸಿದ್ದೆವು. ಕುದುರೆಮುಖದ ಸುತ್ತಮುತ್ತ ಒಟ್ಟು ೪೦ ಹೋಂಸ್ಟೇಗಳಿವೆಯಂತೆ. ೩೧ ಮಂದಿ ಮಾರ್ಗದರ್ಶಿಗಳಿದ್ದಾರಂತೆಒಬ್ಬ ಮಾರ್ಗದರ್ಶಿಗೆ ರೂ.ಸಾವಿರ ಸಂಭಾವನೆ.ಹತ್ತು ಜನರ ತಂಡಕ್ಕೆ ಒಬ್ಬ ಮಾರ್ಗದರ್ಶಿಯಂತೆ. ಕುದುರೆಮುಖ ಶಿಖರವೇರಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಪ್ರವೇಶಧನ ಒಬ್ಬರಿಗೆ ರೂ.೫೦೦. (ತಂಡದಲ್ಲಿ ಜಾಸ್ತಿ ಜನರಿದ್ದರೆ ಬಹುಶಃ ರಿಯಾಯಿತಿ ದರ ಇರಬಹುದೆಂದು ತೋರುತ್ತದೆ.) ಯಾರೇ ಹೋದರೂ ಮಾರ್ಗದರ್ಶಿಗಳ ಸಹಾಯ ಇಲ್ಲದೆ ಶಿಖರ ಏರುವಂತಿಲ್ಲ

ಪ್ರವೇಶ ಸಮಯ ಬೆಳಗ್ಗೆ ೬ರಿಂದ ೧೧. ಸಂಜೆ ಆರು ಗಂಟೆಯೊಳಗೆ ಪರ್ವತ ಇಳಿದಾಗಬೇಕು. ವಾರದಲ್ಲಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಬರುವರಂತೆ. ಹೆಚ್ಚಿನ ಮಾರ್ಗದರ್ಶಿಗಳಿಗೂ ಇದು ಉಪವೃತ್ತಿ. ಬಾಕಿ ಉಳಿದ ದಿನ ಕೃಷಿ ಚಟುವಟಿಕೆಯಲ್ಲಿ ನಿರತರು. ನಮ್ಮೊಡನೆ ಇದ್ದ ಮಾರ್ಗದರ್ಶಿ ಪ್ರಮಥ, ಪಿಯುಸಿ ಮುಗಿಸಿ ಮುಂದೆ ಓದದೆ ಕೆಲಸ ಮಾಡುತ್ತಿರುವ ಯುವಕ. ಮಾತು ಚೆನ್ನಾಗಿ ಆಡುತ್ತಾನೆ. ಅವನ ಸಂಪರ್ಕ ಸಂಖ್ಯೆ 94827 60287. ಕುದುರೆಮುಖ ಚಾರಣಕ್ಕೆ ಹೋಗಬೇಕಾದವರು ಅವನನ್ನು ಸಂಪರ್ಕಿಸಬಹುದು.

   ಕುದುರೆಮುಖ ರಾಷ್ಟ್ರೀಯ ಉದ್ಯಾನವನ ೬೦೦ ಚದರ ಕಿಮೀ ವಿಸ್ತೀರ್ಣದಲ್ಲಿದೆ. ೧೮೯೨ ಮೀಟರ್ ಎತ್ತರದಲ್ಲಿರುವ ಕುದುರೆಮುಖ ಶಿಖರ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ. (ಮೊದಲನೆಯದು ಮುಳ್ಳಯ್ಯನಗಿರಿ ೧೯೨೫ಮೀಟರ್) ಚಿಕ್ಕಮಗಳೂರಿನಿಂದ ೯೫ಕಿಮೀ ದೂರದಲ್ಲಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸುಮಾರು ೧೩ ಚಾರಣ ಸ್ಥಳಗಳಿವೆಯಂತೆ.

ಈ ಶಿಖರವು ದೂರದಿಂದ ಕುದುರೆಯ ಮುಖದಾಕೃತಿಯಂತೆ ಕಾಣುವುದರಿಂದ ಕುದುರೆಮುಖ ಎಂದು ಹೆಸರು ಬಂದಿದೆ. 

ಒಂದು ಕಾಲದಲ್ಲಿ ಕುದುರೆಮುಖದಲ್ಲಿ ಕಬ್ಬಿಣದ ಅದುರು ತಯಾರಾಗುತ್ತಿದ್ದ ಕಾರ್ಖಾನೆ ಉಚ್ಛ್ರಾಯ ಸ್ಥಿತಿಯಲ್ಲಿತ್ತುಗಣಿಗಾರಿಕೆಯಿಂದಾಗಿ ಅಲ್ಲಿಯ ಬೆಟ್ಟಗಳು ಕರಗಲಾರಂಭಿಸಿದುವು. ಇದರಿಂದ ಪರಿಸರದ ಮೇಲಾಗುವ ಹಾನಿಯ ಕಾರಣದಿಂದ ಪರಿಸರವಾದಿಗಳು ಹೋರಾಟ ಮಾಡಿ ಕಾರ್ಖಾನೆ ೨೦೧೫ರಲ್ಲಿ ಮುಚ್ಚಲ್ಪಟ್ಟಿತು. ಕ್ರಮೇಣ ಕುದುರೆಮುಖ ಪೇಟೆಯೂ ಹಾಳುಬಿತ್ತು. ನಮಗೆ ಕುದುರೆಮುಖ ಪೇಟೆ ಕಡೆಗೆ  ಹೋಗಲು ಸಾಧ್ಯವಾಗಲಿಲ್ಲ.

೧೨.೩೫ಕ್ಕೆ ಕೆಳಗೆ ಇಳಿಯಲು ತೊಡಗಿ, .೪೫ಕ್ಕೆ ಪಿಕಪ್ ಬಳಿಗೆ ತಲಪಿ ಜೀಪಿನಲ್ಲಿ ೬ಕಿಮೀ.ಸಾಗಿ ಸಂಸೆ ತಲಪಿದೆವು. ಬರುವಾಗ ಚಾಲಕನ ಪಕ್ಕ ಕೂರಲು ಸೀಟ್ ದೊರೆತು ಸುಖ ಪ್ರಯಾಣವಾಯಿತು! ಬನ್ಸ್ ಹಾಗೂ ಸಾಟು ಕಾಫಿ ಸೇವನೆಯಾಗಿ, ಸ್ನಾನವಾಗಿ ವಿಶ್ರಾಂತಿ ಪಡೆದೆವು

   ನಾಳೆಯ ಕಾರ್ಯಕ್ರಮದ ಬಗ್ಗೆ ರಾತ್ರಿಯೇ ಮಾಹಿತಿ ಕೊಟ್ಟರು. ಕುದುರೆಮುಖ ಶಿಖರ ಏರಲಾಗದಿದ್ದವರು ಮೇರುತಿ ಚಾರಣಕ್ಕೆ ಹೊರಡುವುದೇ ಬೇಡ. ವಾಪಾಸು ಬರ್ತಾ ಬೇರೆ ದಾರಿಯಿಂದ ಬರುವುದು ಅರ್ಧ ಹತ್ತಿ ವಾಪಾಸಾದರೆ ಹಿಂದಕ್ಕೆ ಬರುವುದು ಕಷ್ಟ ಎಂದರು. (ನಮ್ಮ ತಂಡದಲ್ಲಿ ಮಹಾರಾಷ್ಟ್ರ, ಕೇರಳ ಇತ್ಯಾದಿ ಹೊರ ರಾಜ್ಯದಿಂದ ಬಂದ ಚಾರಣಿಗರಿದ್ದ ಕಾರಣ, ನಮ್ಮ ಕರ್ನಾಟಕದವರು ನಡೆಸುವ ಚಾರಣದಲ್ಲೂ ಕನ್ನಡದಲ್ಲಿ ವಿವರ ಕೇಳುವ ಸೌಭಾಗ್ಯ ಸಾಧ್ಯವಾಗದೆ ಇದ್ದದ್ದು ಬೇಸರದ ವಿಷಯ. ಆದರೆ ಆಯೋಜಕರು ಕನ್ನಡದಲ್ಲಿ ಹೇಳಬೇಕ? ಎಂದು ಕೇಳಿದ್ದರು. ಆದರೆ ಯಾರೂ ಬೇಕು ಎಂದು ಹೇಳಲಿಲ್ಲ. ಆವಾಗ ಕೂಡ ಕನ್ನಡದಲ್ಲಿ ಹೇಳಬೇಕು ಎಂದು ಹೇಳದೆ (ಜನ್ಮತಾ ನನಗೆ ಬಾಯಿಬಿಡಲು ಅಳುಕು, ಸಂಕೋಚವೇ ಪ್ರಧಾನವಾದ್ದರಿಂದಇದ್ದದ್ದು ನನ್ನದೇ ದೊಡ್ಡ ತಪ್ಪು.)  ಬಳಿಕ, ರಾತ್ರಿ ಊಟ ಬಿಸಿಬೇಳೆಬಾತ್, ಅನ್ನ, ಸಾಂಬಾರು ಹಪ್ಪಳ, ತೊಂಡೆಪಲ್ಯ, ಅಲಸಂಡೆ ಗಸಿ,ಹೋಳಿಗೆ, ಮಜ್ಜಿಗೆ, ಬಾಳೆಹಣ್ಣು.

.೩೦ಗೆ ಲೈಟ್ ಆರಿಸಬೇಕು. ನಿದ್ದೆಗಿಳಿಯಲೇಬೇಕು ಎಂದು ಕಟ್ಟಪ್ಪಣೆಯನ್ನು ಶಿರಸಾ ಪಾಲಿಸಿದೆವು. ಗೊರಕೆಗೆ ಹೆದರಿದ ಚದುರೆಯಾದ ನಾನು ವಧುವಿನ ಕೋಣೆ ಹೊಕ್ಕು ಮಲಗಿದ್ದರಿಂದ ಗೊರಕೆಯ ರಾಗಾಲಾಪನೆ ಕೇಳದೆ ಚೆನ್ನಾಗಿ ನಿದ್ದೆ ಆಗಿತ್ತು

ನೇತ್ರಾವತಿಗುಡ್ಡದೆಡೆಗೆ ಗಮನ

ತಾರೀಕು ೧೨.೧೧.೨೨ರಂದು ೪ಕ್ಕೆ ಗಂಟೆಯ ಸದ್ದಾಯಿತು. ಆ ಸದ್ದಿಗೆ ಏಳಲೇಬೇಕು. ಎದ್ದು ತಯಾರಾದೆವು.೧೫ಕ್ಕೆ ತಿಂಡಿ (ಇಡ್ಲಿ, ವಡೆ, ಚಟ್ನಿ, ಸಾಂಬಾರು, ಕೇಸರಿಭಾತ್, ನೇಂದ್ರಬಾಳೆಹಣ್ಣು) ತಿಂದು ಬುತ್ತಿಗೆ ಬದನೆಅನ್ನ ತುಂಬಿಸಿಕೊಂಡು . ಕ್ಕೆ ಪಿಕಪ್ ಜೀಪ್ ಹತ್ತಿ ಸುಮಾರು ಕಿಮೀ ಹೊರಟೆವು. ಹೋಗುವ ದಾರಿಯಲ್ಲಿ ಕಾಫಿ ತೋಟ, ಚಹಾ ತೋಟದ ಸೊಬಗು.  ನೇತ್ರಾವತಿ ಗುಡ್ಡಕ್ಕೆ ಹತ್ತುವ ದಾರಿಯಾದ ಗುತ್ಯಡ್ಕ ತಲಪಿ ಜೀಪಿಳಿದೆವು. ಬೆಳಗ್ಗೆ ೭ಕ್ಕೆ ನಾವು ನಡೆಯಲು ಸುರುರಸ್ತೆ, ಕಾಫಿತೋಟದ ಬದಿ, ಕಾಡೊಳಗೆ ಸುಮಾರು ೬ಕಿಮೀ ದೂರ ಸಾಗಿದೆವು.

ಸ್ಥಳೀಯ ಮಾರ್ಗದರ್ಶಿ ಲೋಕೇಶ್ ಅವರೊಡನೆ ಮಾತಾಡುತ್ತ ಸಾಗುವಾಗ ಒಂದೆಡೆ ನೇತ್ರಾವತಿ ಗುಡ್ಡದಿಂದ ಹರಿಯುವ ನೀರು ಕಣಿಯಲ್ಲಿ ಹರಿಯುತ್ತಲಿರುವುದು ಕಂಡಾಗ, ಆ ನೀರು ನಮ್ಮ ಚಿಕ್ಕಪ್ಪನ ಮನೆಗೆ ಹರಿಯುತ್ತದೆ. ನಮ್ಮ ಅಪ್ಪನೇ ವ್ಯವಸ್ಥೆ ಮಾಡಿರುವುದು, ನಮ್ಮ ಅಮ್ಮನಿಗೆ ಈಗ ೧೦೬ ವರ್ಷ. ಎಂದರು. ನಿಮಗೆ ಎಷ್ಡು ವರ್ಷ ಎಂದು ಕೇಳಿದಾಗ, ೪೦ ಆಗಿರಬಹುದು ಅಲ್ವ ಎಂದು ನಮ್ಮನ್ನೇ ಕೇಳಿದರು

ಅಲ್ಲಿ ಸುತ್ತಮುತ್ತ ಸುಮಾರು ಹೋಂಸ್ಟೇಗಳು ಇವೆಯಂತೆ. ೬೧ ಮಂದಿ ಮಾರ್ಗದರ್ಶಿಗಳು ಇದ್ದಾರಂತೆ. ಅವರಿಗೆ ಸಂಭಾವನೆ ಸಾವಿರ ರೂ. ಅಂತೆ. ನೇತ್ರಾವತಿ ಗುಡ್ಡ ಹತ್ತಲೂ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಪ್ರವೇಶ ದರ ತಲಾ ರೂ.೫೦೦. ಮಾರ್ಗದರ್ಶಿಗಳ ಸಂಪರ್ಕ ಸಂಖ್ಯೆ ಲೋಕೇಶ್ 94806 37074, ವಿಶ್ವನಾಥ 94803 07523, 82960 09810


ಸಾಗುವ ದಾರಿ ಏರುಗತಿ ಹೆಚ್ಚೇನಿಲ್ಲ. ಬಿಸಿಲು ಇರಲಿಲ್ಲ. ನಡೆಯುತ್ತ ಇರುವಾಗ ರೇಣುಕಾ ಬಳಿ, ಗಾಳಿಯೂ ಇಲ್ಲ ಒಂದು ಎಲೆಯೂ ಅಲ್ಲಾಡುತ್ತಿಲ್ಲ ಎಂದಿದ್ದೆ. ಮುಕ್ಕಾಲು ಭಾಗ ಹತ್ತಿಯಾಗುವಾಗತಕೋ ಗಾಳಿ ಎಷ್ಟು ಬೇಕು ಸಾಕಾ ಎಂದು ಸುಯ್ಯನೆ ಬೀಸಲಾರಂಭಿಸಿತು. ಗಾಳಿಯ ಆನಂದ ಅನುಭವಿಸುತ್ತ .೧೦ಕ್ಕೆ ನೇತ್ರಾವತಿ ಗುಡ್ಡದ ನೆತ್ತಿ ತಲಪಿದಾಗ ಅಲ್ಲಿ ವಾಯುರಭಸಕ್ಕೆ ನಿಲ್ಲುವುದೇ ಕಷ್ಟವೆನಿಸಿತು. ಗಾಳಿಯ ರಭಸ ಎಷ್ಟಿತ್ತೆಂದರೆ ಹಗುರವಾಗಿ ಇದ್ದವರು ಗಾಳಿಯಿಂದ ಹಾರಿಹೋದಾರು. ಹೆಚ್ಚಿನವರಿಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಬೇಗನೆ ಇಳಿದರು. ನನಗಂತೂ ಪವನ ಬಹಳ ವಿನೂತನ ಅನುಭವ ಕೊಟ್ಟಿತು. ಸಾಕಷ್ಟು ಹೊತ್ತು ಅಲ್ಲಿ ನಿಂತು ಸುಖ ಪಟ್ಟಿದ್ದೆ. ಮೇಲೆ ಹೆಚ್ಚು ವಿಶಾಲವಾದ ಸ್ಥಳವಿಲ್ಲ. ಗಾಳಿಯ ಹೊಡೆತ ಜೋರಾಗಿದ್ದದ್ದರಿಂದ ಹೆಚ್ಚು ಹೊತ್ತು ಅಲ್ಲಿ ನಿಲ್ಲಲು ಹಾಗೂ ಕೆಳಭಾಗಕ್ಕೆ ಹೋಗದಂತೆ ಮಾರ್ಗದರ್ಶಿಗಳು ಎಚ್ಚರವಹಿಸಿದರುನೇತ್ರಾವತಿ ಶಿಖರವು ೧೫೨೦ಮೀಟರ್ ಎತ್ತರದಲ್ಲಿದೆ.



   ಎರಡೂ ದಿನವೂ ದಾರಿಯಲ್ಲಿ ಕಾಡು ಹೂವುಗಳು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದುವು.

   ಓ ಅಲ್ಲಿ ನೇತ್ರಾವತಿ ಉಗಮ ಸ್ಥಾನ ಎಂದು ಕಾಡೊಳಗೆ ದೂರದ ಕಡೆಗೆ ಕೈತೋರಿ ಹೇಳಿದರು.  ಈಗ ಅಲ್ಲಿಗೆ ಹೋಗಲು ಅರಣ್ಯ ಇಲಾಖೆಯವರು ಬಿಡುವುದಿಲ್ಲವಂತೆ.  ಬೇಸಿಗೆಯಲ್ಲಿ ಮಾತ್ರ ಅನುಮತಿ ಇದೆಯಂತೆ. ನೇತ್ರಾವತಿ ನದಿ ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗಿ ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರ ಸೇರುತ್ತದೆ.   ಪುರಾಣದ ಕಥೆ ಹೀಗಿದೆ: ಹಿಂದೆ ಹಿರಣ್ಯಾಕ್ಷನೆಂಬ ದಾನವನನ್ನು ವರಾಹ ಸ್ವಾಮಿ ಸಂಹರಿಸಿ ಭೂಮಿಯನುದ್ಧರಿಸಿದ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ಛಂಗೇರಿಯಿಂದ ೧೬ ಕಿಮೀ. ದೂರದಲ್ಲಿ ಪಶ್ಚಿಮಘಟ್ಟಗಳ ಒಂದು ಭಾಗವಾದ ಗಂಗಾಮೂಲ, ವರಾಹಪರ್ವತ ಎಂದು ಕರೆಯಲ್ಪಡುವ ವೇದಪಾದ ಪರ್ವತದಲ್ಲಿ ವಿಶ್ರಮಿಸಿದನಂತೆ. ಆಗ ಮೂರ್ತಿಯ ಎಡಕೋರೆಯಿಂದ ಇಳಿದ ಹನಿಗಳು ತುಂಗಾ ನದಿಯಾಗಿಯೂ, ಭೂಮಿಯನ್ನು ಭದ್ರವಾಗಿ ಹಿಡಿದುಕೊಂಡ ಬಲದಾಡೆಯ ಹನಿಗಳು ಭದ್ರಾ ನದಿಯಾಗಿಯೂ. ಕಣ್ಣಂಚಿನ ಹನಿಗಳು ನೇತ್ರವತಿಯಾಗಿಯೂ ಹರಿದುವೆಂಬುದು ಪುರಾಣ ಕಥೆ. ವರಾಹಪರ್ವತದ ಕಣ್ಣಿನಂತಿರುವ ಭಾಗದಿಂದ ಹರಿದುಬರುವ ನೇತ್ರಾವತೀ ನದಿಯ ನೀರು ನೇತ್ರರೋಗ ಪರಿಹಾರಕವೆಂದು ನಂಬಿಕೆಯಿದೆ. (ಕೃಪೆ: ವೀಕಿಪೀಡಿಯಾ)


ನೇತ್ರಾವತಿ ಗುಡ್ಡ ಏರಲು ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ನಿಮಗೆ ನಡೆಯಲು ಬಲು ಕಷ್ಟ. ಶನಿವಾರ ಬೇರೆ.  ಎಂದೆಲ್ಲ ನಿನ್ನೆ ಪ್ರಮಥ ಹೆದರಿಸಿದ್ದ.  ಅದಕ್ಕೆ ಸಾಕ್ಷಿಯಾಗಿ ನಾವು ಇಳಿಯುವಾಗ ನೂರಾರು ಜನ ಗುಡ್ಡ ಹತ್ತುತ್ತ ಇದ್ದುದು ಕಂಡೆವು.  ಇತ್ತೀಚೆಗೆ ಈ ಗುಡ್ಡಕ್ಕೆ ಜನ ಪ್ರವಾಹವೇ ಹರಿದು ಬರುತ್ತಲಿದೆಯಂತೆ. ವಾರದಲ್ಲಿ ನಾಲ್ಕು ದಿನ ಕಡಿಮೆ ಎಂದರೂ ೩೫೦ರಿಂದ ೬೦೦ ಜನರತನಕ ಚಾರಣಿಗರು ಬರುವರಂತೆ. ಅರಣ್ಯ ಇಲಾಖೆಯ ಅದೃಷ್ಟ ಖುಲಾಯಿಸಿದೆ ಎನ್ನಬಹುದು.


 .೪೫ಕ್ಕೆ ಅಲ್ಲಿಂದ ಹೊರಟು ಕೆಳಭಾಗಕ್ಕೆ ಬಂದು ನೀರು ಹರಿಯುವಲ್ಲಿ ಊಟ ಮಾಡಿ ಅಲ್ಲಿ ಮುಕ್ಕಾಲು ಗಂಟೆ ಕೂತಿದ್ದೆವು. ಅಲ್ಲಿಂದ ಮುಂದುವರಿದು ಜೀಪಿನ ಬಳಿ ತಲಪಿದಾಗ ೧೨.೧೫. ಜೀಪಿನಲ್ಲಿ ಹೊರಟು ಸಂಸೆಗೆ .೩೦ಗೆ ತಲಪಿದೆವು. ಸ್ನಾನಾದಿ ಮುಗಿಸಿ ವಿಶ್ರಾಂತಿ ಪಡೆದೆವು.‌ 



 ಅಲ್ಲೇ ಪಕ್ಕದಲ್ಲೇ ಹರಿಯುತ್ತಲಿದ್ದ ನದಿಗೆ ಹೋದೆವು. ಸೇತುವೆ ಕೆಳಗೆ ಮರದ ದಿಮ್ಮಿಗಳು ಒಟ್ಟುಗೂಡಿದ್ದು ನೀರು ಹರಿದು ಹೋಗಲು ಅಡ್ದಿಯಾಗಿ ಸೇತುವೆ ಹಾನಿಯಾಗಬಹುದೇನೋ. ಕೆಲವರು ನದಿಗಿಳಿದು ಈಜಿದರು. ನೀರೊಳಗೆಯೇ ಇದ್ದವರು ಒಳ್ಳೆ (ನೀರುಹಾವು) ಕಂಡು ನೀರಿನಿಂದ ಮೇಲೆ ಓಡಿ ಬಂದರು!
   ಸಂಜೆ ಗೋಳಿಬಜೆ, ಚಟ್ನಿ  ಕಾಯಿ ಬರ್ಫಿ , ಕಾಫಿ, ಚಹಾ. ಅಡುಗೆಮನೆಗೆ ಯಾರೂ ಹೋಗತಕ್ಕದ್ದಲ್ಲ ಎಂದಿದ್ದರು. ಅನುಮತಿ ಪಡೆದು ಒಳಪ್ರವೇಶಿಸಿ ಪಟ ತೆಗೆದಿದ್ದೆ.           
ಕಳಸೇಶ್ವರ ದೇಗುಲ

ಜನಾರ್ದನ,ವಿನಯಾ, ಸಂಕಲ್ಪ, ಹಾಗೂ ನಾನು, ಪ್ರಶಾಂತನ ಸಾರಥ್ಯದಲ್ಲಿ, ಸಂಜೆ ದಕ್ಷಿಣ ಕಾಶಿ ಕಳಸೇಶ್ವರ ದೇಗುಲಕ್ಕೆ ಹೋದೆವುಕಳಸೇಶ್ವರ ದೇಗುಲದಲ್ಲಿರುವ ಶಿವಲಿಂಗ  ೪೦೦೦ ವರ್ಷದ ಹಿಂದೆ ಅಗಸ್ತ್ಯರ ಕಾಲದಲ್ಲಿ ಅಲ್ಲಿ ಉದ್ಭವಗೊಂಡದ್ದಂತೆ. ೧೦೦೦ ವರ್ಷದ ಹಿಂದೆ ದೇವಾಲಯ ನಿರ್ಮಾಣವಾಗಿದ್ದಂತೆ. ಪಾರ್ಶ್ವದಲ್ಲೇ ಮಹಾಲಕ್ಷ್ಮಿ ದೇಗುಲವೂ ಅಗಸ್ತ್ಯರಿಂದ ಪ್ರತಿಷ್ಟಾಪಿಸಲ್ಪಟ್ಟದ್ದಂತೆ. ದೇಗುಲ ನೋಡಿ ಅಲ್ಲಿಂದ ನಿರ್ಗಮನ.

ಅಂಬಾ ತೀರ್ಥ

ಇಲ್ಲೇ ಹತ್ತಿರದಲ್ಲಿ ಅಂಬಾ ತೀರ್ಥ ಅಂತ ಇದೆಯಂತೆ. ಅಲ್ಲಿ ಮಧ್ವರು ಒಂದರಮೇಲೊಂದು ಎತ್ತಿಟ್ಟ ಬಂಡೆ ಇದೆಯಂತೆ ನೋಡಿ ಎಂದು ವಿನಯಾ ಅವರ ಅಮ್ಮ ಹೇಳಿದ್ದರಂತೆ. ಹಾಗೆ ನಾವು ಗೂಗಲಣ್ಣನ ಸಹಾಯದಿಂದ ಅಂಬಾ ತೀರ್ಥ ನದಿ ಬಳಿಗೆ ಹೋದೆವು. ನದಿಯ ಪರಿಸರ ಪ್ರಶಾಂತವಾಗಿತ್ತು. ದೂರದಲ್ಲಿ ಒಂದರಮೇಲೊಂದು ಬಂಡೆಗಲ್ಲು ಕಂಡು ಅದೇ ಮಧ್ವರು ಎತ್ತಿಟ್ಟ ಬಂಡೆಗಲ್ಲು ಆಗಿರಬಹುದು ಎಂದು ಕಲ್ಪಿಸಿಕೊಂಡು ಅದನ್ನು ನೋಡಿ ಸಂತೋಷಪಟ್ಟು ಅಲ್ಲಿಂದ ಸಂಸೆಗೆ ಹಿಂದಿರುಗಿದೆವು.



 ಪದ್ಮಾವತಿ ದೇಗುಲ

ನಾವು ಉಳಿದುಕೊಂಡಿದ್ದ ತ್ರೈರತ್ನ ಭವನದ ಬಳಿಯೇ ಪದ್ಮಾವತಿ ದೇವಸ್ಥಾನ ಇತ್ತು. ಅಲ್ಲಿಗೆ ಹೋದೆವು. ಬ್ರಹ್ಮ, ವರಮಹಾಲಕ್ಷ್ಮೀ, ಪದ್ಮಾವತಿ ಮೂರ್ತಿಗಳಿರುವ ದೇಗುಲ ಬಹಳ ವಿಶಾಲವಾದ ಸ್ಥಳದಲ್ಲಿದೆ ಅಲಂಕಾರ ಬಹಳ ಚೆನ್ನಾಗಿ ಮಾಡಿದ್ದರು

ಇಲ್ಲಿ ಬಳಸಿದ ಕೆಲವು ಪಟಗಳು ಸಹಚಾರಣಿಗರದು. ಅವರಿಗೆ ಧನ್ಯವಾದ

ಮುಂದುವರಿಯುವುದು


2 ಕಾಮೆಂಟ್‌ಗಳು: