ಇದು ನಿಸರ್ಗದ ಸೊಬಗನ್ನು ವೀಕ್ಷಿಸಲು ತೆರೆದಿರುವ ಬ್ಲಾಗ್. ನಿಸರ್ಗದ ಸೊಬಗು ಬಲು ಮನೋಹರ. ಅವನ್ನು ನೋಡಲು ಎರಡು ಕಣ್ಣು ಸಾಲದು. ಅದಕ್ಕೆ ೩ನೇ ಕಣ್ಣಿಂದ ನೋಡಿದ ಅಂಥ ಕೆಲವು ಚಿತ್ರಗಳನ್ನು ಹಾಕಲೆಂದೇ ಈ ಬ್ಲಾಗ್ ತೆರೆದಿರುವೆ. ಎಲ್ಲೇ ಹೋಗಲಿ ಕೈಯಲ್ಲಿ ಕ್ಯಾಮರ ಇದ್ದರೆ ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿಯುವ ದುರಾಭ್ಯಾಸ ಇದೆ! ಅದರಲ್ಲಿ ಕೆಲವನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಹಾಕಲು ಉದ್ದೇಶಿಸಿದ್ದೇನೆ.
ಇದರಲ್ಲಿ ಚಾರಣ ಲೇಖನ, ಪ್ರವಾಸ ಕಥನ, ಇತ್ಯಾದಿ ಲೇಖನಗಳನ್ನು ಚಿತ್ರಸಹಿತ ಹಾಕಲಾಗುತ್ತದೆ.
ಮಾಲೇಕಲ್ಲು ತಿರುಪತಿ ಬೆಟ್ಟ, ಜೇನುಕಲ್ಲು ಸಿದ್ದೇಶ್ವರ ಬೆಟ್ಟ
ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮದಲ್ಲಿರುವ ಅಮರಗಿರಿಮಾಲೇಕಲ್ಲುತಿರುಪತಿಕರ್ನಾಟಕದತಿರುಪತಿಎಂದೇಹೆಸರಾಗಿದೆ. ೨೩.೧೦.೨೦೨೨ರಂದುಅಲ್ಲಿಗೆಹೋಗುವಅವಕಾಶಲಭಿಸಿತು. ಆದಿನಬೆಳಗ್ಗೆ೫.೩೦ಗೆಮೈಸೂರಿನವಾರ್ತಾಭವನದಎದುರುನಾವುಹಾಜರಾಗಿಕರಾರಸಾನಿ (ಒಪ್ಪಂದದ
ಮೇರೆಗೆ)ಬಸ್ಏರಿದೆವು. ೫.೪೫ಕ್ಕೆಹೊರಟು೯.೩೦ಗೆಅರಸೀಕೆರೆತಲಪಿದೆವು. ಬಸ್ಸಲ್ಲಿತಿಂಡಿ (ಉಪ್ಪಿಟ್ಟು, ಕೇಸರಿಭಾತ್) ತಿಂದಿದ್ದೆವು. ನಾವು೫೫ಮಂದಿಒಟ್ಟುಸೇರಿನಮ್ಮಹೆಸರುಹೇಳಿಮುಂದೆಬೆಟ್ಟಹತ್ತಲುಮುನ್ನಡೆದೆವು. ನಮ್ಮಬಸ್ಸಿನಚಾಲಕಸಂತೋಷ್ಕೂಡನಮ್ಮೊಂದಿಗೆಸೇರಿಕೊಂಡರು. ಕೆಲವು ಜನ ಮೊದಲ ಬಾರಿ ಚಾರಣ ಬಂದವರಿದ್ದರು.
ಮೊದಲಿಗೆ ಗುಂಡಮ್ಮ ದೇವಿಯ ದರ್ಶನವಾಗುತ್ತದೆ,
ಬೆಟ್ಟಕ್ಕೆ ತೆರಳುವ ಮೆಟ್ಟಲಿನ ಬಳಿ ಆಂಜನೇಯನ ದರ್ಶನ.
ವಸಿಷ್ಠ ಮುನಿಗಳು ಹೀರೆಕಲ್ ಬೆಟ್ಟದಲ್ಲಿ
ವೆಂಕಟೇಶ್ವರ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುತ್ತ, ಅಲ್ಲಿ ತಪವನ್ನಾಚರಿಸಿದ್ದರು. ವಸಿಷ್ಟರು
ಅಲ್ಲಿಂದ ತೆರಳಿದ ಬಳಿಕ ಆ ವಿಗ್ರಹಕ್ಕೆ ಪೂಜೆ ನಡೆಯದೆ ಕ್ರಮೇಣ ನಶಿಸಿ ಭೂಗರ್ಭ ಸೇರಿತು.. ಕ್ರಿ.ಶ. ೧೨-೧೩ನೆಯ ಶತಮಾನದಲ್ಲಿ ಚಿತ್ರದುರ್ಗದ
ಪಾಳೇಗಾರನಾಗಿದ್ದ ತಿಮ್ಮಪ್ಪನಾಯಕನಿಗೆ ಸ್ವಾಮಿ ಕನಸಿನಲ್ಲಿ ದರ್ಶನ ಕೊಟ್ಟು, ಅರಸೀಕೆರೆಯ ಬೆಟ್ಟದಲ್ಲಿ
ಇರುವುದಾಗಿಯೂ ಅಲ್ಲಿ ಗುಡಿ ಕಟ್ಟಿಸುವಂತೆ ಸೂಚಿಸಿದನು. ತಿಮ್ಮಪ್ಪ ನಾಯಕ ಸ್ವಾಮಿಯ ಅಣತಿಯಂತೆ
ಕೈಯಲ್ಲಿ ತುಳಸಿಮಾಲೆ ಹಿಡಿದು ಅರಸೀಕೆರೆಯ ಬೆಟ್ಟದಲ್ಲಿ ಸಾಗುತ್ತಿದ್ದಾಗ ಕೈಯಲ್ಲಿದ್ದ
ತುಳಸೀಮಾಲೆ ಒಂದು ಕಲ್ಲಿನ ಮೇಲೆ ಬಿತ್ತು. ಆ ಸ್ಥಳದಲ್ಲಿ ವಿಗ್ರಹ ದೊರಕಿತು. ಮಾಲೆ ಕಲ್ಲಿನ ಮೇಲೆ
ಬಿದ್ದ ಕಾರಣ ಮಾಲೇಕಲ್ಲು ಎಂದು ಹೆಸರು ಬಂತು. ಅಲ್ಲಿ ದೇವಾಲಯ ಕಟ್ಟಿಸಿದರು ಎಂಬುದು ದಂತಕಥೆ.
ತಂಡದಪಟತೆಗೆಸಿಕೊಂಡುನಾವುಬೆಟ್ಟಇಳಿಯಲುತೊಡಗಿದಾಗ೧೨.೩೦. ಮೆಟ್ಟಲುಏರುವಾಗಆಗುವಕಷ್ಟಇಳಿಯುವಾಗಆಗುವುದಿಲ್ಲ. ಕಾಡು ಹೂಗಳು ಕೆಲವು ಕಂಡುವು. ೧.೧೦ಕ್ಕೆಕೆಳಗೆತಲಪಿದ್ದೆವು.
ಮಾಲೇಕಲ್ಲಿಗೆ ಬೆಂಗಳೂರಿನಿಂದ
ಸುಮಾರು ೧೯೭ಕಿಮೀ. ಮೈಸೂರಿನಿಂದ ಸುಮಾರು ೧೪೯ಕಿಮೀ.
ಕರಿನಾಯಿಯೊಂದು ನಮ್ಮೊಂದಿಗೆ ಬೆಟ್ಟಕ್ಕೆ ಬಂದು ವಾಪಾಸು ಹಿಂದಿರುಗಿತು. ಆಶ್ಚರ್ಯದ ಸಂಗತಿ ಎಂದರೆ ನಾವು ಯಾವುದೇ ಊರಿನ ಬೆಟ್ಟ ಹತ್ತುವಾಗಲೂ ಅಲ್ಲಿಯ ನಾಯಿಯೊಂದು ನಮ್ಮೊಡನೆ ಬೆಟ್ಟಕ್ಕೆ ಬರುತ್ತದೆ.
ಗೋವಿಂದರಾಜ ದೇಗುಲ
ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿದೊಡ್ಡದಾದಗೋವಿಂದರಾಜದೇಗುಲಇದೆ. ಎದುರುಭಾಗದಲ್ಲಿಸುಂದರಕೊಳವೂಇದೆ. ಈ ಕೊಳ ಎಂದೂ
ಬತ್ತುವುದಿಲ್ಲವಂತೆ.
ದೇಗುಲದೊಳಗೆಹೋದೆವು. ದೇಗುಲದ ಎದುರು ಬೃಹತ್ರಾಜಗೋಪುರಇದೆ. ಈ ಗೋಪುರ (೨೦೨೧) ಹೊಸದಾಗಿ
ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿಮಲಗಿದಭಂಗಿಯಲ್ಲಿರುವವೆಂಕಟೇಶ್ವರನಪ್ರತಿಮೆಇದೆ. ಸುಮಾರು೮೫೦ವರ್ಷದಷ್ಟುಹಳೆಯದಾದದೇಗುಲತಿಮ್ಮಪ್ಪನಾಯಕನಕಾಲದಲ್ಲಿಕಟ್ಟಲಾಗಿದೆಯೆಂದುಅರ್ಚಕರುತಿಳಿಸಿದರು. ಪ್ರವೇಶಸಮಯ: ಬೆಳಗ್ಗೆ೭ರಿಂದಮಧ್ಯಾಹ್ನ೨, ಸಂಜೆ೪ ರಿಂದ ೭ರವರೆಗೆ
ಭೋಜನಕಾಲೇಹರಹರ
ದೇಗುಲದಹೊರಆವರಣದಲ್ಲಿಗ್ರಂದಿಗೆ ಶ್ರೀ ನಂಜುಂಡ ವಾಸವಿ ಶ್ರೇಷ್ಠಿ ಎಂಬ ಹಳೆಯಕಾಲದ ಕಲ್ಯಾಣಮಂಟಪದಲ್ಲಿನಮಗೆಭೋಜನದವ್ಯವಸ್ಥೆಮಾಡಿದ್ದರು. ಬಾಳೆಲೆಯಲ್ಲಿಭೂರೀಭೋಜನ.(ಪಾಯಸ,ಕೋಸಂಬರಿ,ಸಂಡಿಗೆ, ಪಕೋಡ,ಜಹಂಗೀರ್, ಪಲಾವ್, ಮೊಸರುಗೊಜ್ಜು, ಮಜ್ಜಿಗೆಹುಳಿ, ಅನ್ನ,ಸಾರು,ಮೊಸರು, ಉಪ್ಪಿನಕಾಯಿ)ಇಷ್ಟೆಲ್ಲಬಗೆಯಊಟಹಾಕಿನಮ್ಮಹೊಟ್ಟೆದೇವರನ್ನುತೃಪ್ತಿಪಡಿಸಲುಶ್ರಮವಹಿಸಿದವರುಹಾಸನದ ಮಂಜಣ್ಣನವರು.
ಶಿವಾಲಯ
ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಅರಸೀಕೆರೆಯ
ಪುರಾತನಶಿವದೇಗುಲಕ್ಕೆಹೋದೆವು. ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪಗಳು, ನಕ್ಷತ್ರಾಕಾರದಲ್ಲಿ ಕಲಾತ್ಮಕ ಕುಸುರಿಕೆತ್ತನೆಯುಳ್ಳಈದೇಗುಲದಗರ್ಭಗುಡಿಯಲ್ಲಿಶಿವಲಿಂಗವಿದ್ದು, ನಿತ್ಯಪೂಜಾಸೇವೆನಡೆಯುತ್ತಲಿದೆ. ದೇಗುಲ ಹಳೆಯದಾದರೂನೋಡಲುಆಕರ್ಷಣೆಕಳೆದುಕೊಂಡಿಲ್ಲ. ಪಕ್ಕದಲ್ಲೇಇರುವಜಿನಾಲಯದಲ್ಲಿಕೂಡ ಶಿವಲಿಂಗವಿದ್ದುಪೂಜೆನಡೆಯುತ್ತಿಲ್ಲ.
ಎರಡನೆಯ ಬಲ್ಲಾಳನ ಕಾಲದಲ್ಲಿ ಈ ದೇಗುಲ ಕಟ್ಟಲ್ಪಟ್ಟಿತು ಎಂಬ ಉಲ್ಲೇಖವಿದೆ.
ಜೇನುಕಲ್ಲು ಸಿದ್ದೇಶ್ವರಬೆಟ್ಟ
ಅರಸೀಕೆರೆಯಿಂದ ಸುಮಾರು ೮ಕಿಮೀ
ದೂರದಲ್ಲಿರುವ ಯಾದಾಪುರ ಗ್ರಾಮದಲ್ಲಿರುವಜೇನುಕಲ್ಲು ಸಿದ್ದೇಶ್ವರ ಸ್ವಾಮಿಬೆಟ್ಟದಬುಡಕ್ಕೆಬಸ್ಸಲ್ಲಿಹೋದೆವು. ಅಲ್ಲಿಬಸ್ಸಿಳಿದುಬೆಟ್ಟಹತ್ತಲುಅನುವಾದೆವು. ಬೆಟ್ಟಕ್ಕೆಹೋಗುವದ್ವಾರದಲ್ಲಿಬೃಹತ್ಗೋಪುರವಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ